ಮರುಳು ಮಾಡಿಕೊಂಡೆಯಲ್ಲೆ ಮಾಯಾ ದೇವಿಯೇ ಉರಗಶಯನ ಗೋವಿಂದ ನಿರುತ ನಿನ್ನ ಮರೆಯದಂತೆ ಪ್ರಲಯದಲ್ಲಿ ಸಕಲಜಗವು ನಿದ್ರಿಸಿರಲು ಜಾಣ್ಮೆಯಿಂದ ಚೆಲುವೆ ನೀನು ಶ್ರುತಿಗಳಿಂದ ಸ್ತುತಿಸಿ ಪತಿಯ ಎಬ್ಬಿಸುತಲಿ. ೧ ಎಷ್ಟು ರೂಪ ಹರಿಯು ತಾಳ್ವ ಅಷ್ಟು ರೂಪದಿಂದ ಇರುತ ಇಷ್ಟ ಪತಿಯ ಸೇವೆಮಾಡಿ ಗರ್ಭದಿಂದ ಬಪ್ಪುವಂತೆ. ೨ ಹರಿಯ ಸದನದಲ್ಲಿ ಸಾಸಿರಾರು ಸಖಿಯರಿರಲು ತಾನೆ ಪರಮ ಸಂಭ್ರಮದಿ ಸಕಲ ಗೃಹದ ಕೃತ್ಯಗಳನು ಮಾಡಿ. ೩ ಹರಿಯು ಧರೆಲಿ ಇರಲು ಆವ ಲೀಲೆಗಳನು ತಾನು ಮಾಳ್ಪ ಅರಿತು ಮತಿಯ ಕುಶಲೆ ತಾನು ಅಂತು ಲೀಲೆಗಳನು ಮಾಡಿ. ೪ ಕೃಷ್ಣ ತನ್ನ ಅಣ್ಣನನ್ನು ರೂಪಗೆಡಹಿ ಮಾನವಳಿಸೆ ಕಷ್ಟಮಾತು ನುಡಿಯೆ ಒಂದಿಷ್ಟು ಕಲಹವಾಗದಂತೆ. ೫ ಅನ್ಯ ಸತಿಯ ಕರವ ಪಿಡಿವ ಕಾಲದಲ್ಲು ಸುರರು ಇರಲು ನಿನ್ನ ಕರೆಸಿ ಬಿಡದೆ ಹರಿಯು ಎದುರಿನಲ್ಲಿ ವರಿಸುವಂತೆ. ೬ ಇನ್ನು ಬೇಡಿಕೊಂಬೆ ಸಿರಿಯೆ ಚೆನ್ನ ರಾಘವವಿಠಲಪಾದ ಎನ್ನ ಮನದಿ ನಲಿಯುವಂತೆ ಮುನ್ನ ಭಾಗ್ಯ ಕೊಟ್ಟು ಕಾಯೆ. ೭