PALAYA MAM SATATA KAILASA NILAYA

ಪಾಲಯ ಮಾಮ್ ಸತತ ಕೈಲಾಸ ನಿಲಯ 
ಫಾಲಾಕ್ಷ ಬೇಡುವೆ ಗೌರಿ ಮನೋಹರ

ವಾಮದೇವ ನಮಿಪೆ ನಿನ್ನನ್ನು 
ಸೋಮಶೇಖರ ಗಂಗೆ ಹೊತ್ತವ
ವ್ಯೋಮಕೇಶ ವೃಕಾರಿ ನಮಿಪೆನು 
ರಾಮ ನಾಮದ ಮಹಿಮೆ ಪೇಳಿದೆ
ಈ ಮಹಿಯೊಳಿನ್ನು ಫೋರೆವರ್ಯಾರೊ 
ನೇಮದಿಂದಲಿ ಸಲಹೋ ದೇವ
ಶ್ಯಾಮಸುಂದರನ ಧ್ಯಾನದೊಳ
ಗೀಮನವ ನಿಲ್ಲುವಂತೆ ಮಾಡೋ. ೧

ಭೂರಿಕರುಣನೆ ಆಶುತೋಷನೆ
ಮಾರಮಾರನೆ ಸುರರ ಜನಕನೆ
ಚಾರುಶೀಲ ವಿರಿಂಚಿ ತನಯನೆ
ಈರ ತಾತನ ಶಾಸ್ತ್ರ ಬೋಧಿಸು
ಹೇರಂಬತಾತನೆ ಅಂಘ್ರಿಯುಗಳವ
ಸಾರಿ ಭಜಿಪೆನೊ ಕರುಣಿ ಲಾಲಿಸು
ಪಾರುಗಾಣಿಸು ವೇಗದಿಂದಲ
ಪಾರ ಭವದ  ಉಧದಿಯಿಂದಲಿ. ೨

ಅಂಧಕಾರಿ ಪಿನಾಕಿ ಶರ್ವನೆ
ಸುಂದರಾಂಗಿ ಗಿರಿಜೆ ರಮಣನೆ
ಇಂದುಕಲಧರ ನಾಗಭೂಷಣ
ಮುಂದೆ ಶೇಷನೆ ಪಂಚ ಮೊಗದವ
ಬೆಂದು ಪೋಗುವೆ ರುಜಿನವನ್ಹಿಲಿ
ಬಂಧು ರಕ್ಷಿಸೊ ಅಂತಕಾಖ್ಯನೆ
ಬಂದು ಶೀಘ್ರದಿ ಒದಗದಂದಲಿ
ನಿಂದು ಕಾರ್ಯವ ಮಾಡಿಸೆನ್ನಲಿ. ೩

ರುದ್ರ ಮುಖ್ಯನೆ ತತ್ವಕೊಡೆಯನೆ
ಅದ್ರಿಧರಸತ್ಪೌತ್ರ ವೀರ
ಭದ್ರ ರೂಪದಿ ಘೋರ ಮೆರೆಯುತ
ಛಿದ್ರ ಗೊಳಿಸಿದೆ ದಕ್ಷ ಮಖವನು
ಕ್ಷುದ್ರ ವಿಷಯಂಗಳಲಿ ಮುಳುಗುತ 
ಭದ್ರ ಮಾರ್ಗವ ಕಾಣದಾದೆ ಸ
ಮುದ್ರ ಶಯನನ ಪಾದ ತೋರಿ ಸು
ಭಧ್ರೆ ಅಗ್ರಜ ನಿರುತ ಕಾಯೋ. ೪

ಸರುವವ್ಯಾಪ್ತನೆ ತ್ರಿಪುರಘಾತಕ
ವರದ ಶರ್ವನೆ ವೃಷಭವಾಹನ
ಚರ ಅಚರ ಸೃಜಿಪ ಹರಿಪನೆ
ಪರಮ ವೈಷ್ಣವ ಪ್ರಮಥನಾಥನೆ
ಹರನೆ  ಮೃಡನೆ ನಾಟ್ಯ ಕುಶಲನೆ
ಎರಡೊಂದು ನೇತ್ರನೆ ಶೂಲಪಿಡಿದನೆ
ಪರಮ ಭಕುತಿಯಿಂದ ಬೇಡುವೆ
ಇರಿಸು ರಾಘವ ವಿಠಲನಂಘ್ರಿಲಿ. ೫

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT