HARIDASA NENISUVUDU

ಹರಿದಾಸನೆನಿಸುವುದು ಬಹುದುರ್ಲಭವಯ್ಯ
ಹರಿದಾಸ ಜಗದೊಳು ಬಹುದುರ್ಲಭವಯ್ಯ

ಅರಿಷಡ್ವರ್ಗಗಳ ಜಯವಿರಲಿಬೇಕು 
ಹರಿಸರ್ವೋತ್ತಮನೆಂಬ ಅರಿವು ಇರಲಿಬೇಕು
ಅರಿ ಮಿತ್ರ ಮಧ್ಯಸ್ಥರೊಳು ಸಮಬುದ್ಧಿ ಇರಲಿಬೇಕು
ಹರಿ ಸರ್ವ ಪ್ರೇರಕ ಸರ್ವತಂತ್ರ ಎನಲಿಬೇಕು.

ವರ ಮುದ್ರೆಗಳ ಧರಿಸಿ ಹರಿನಾಮ ಪಾಡಲಿಬೇಕು
ಹರಿದಿನ ಉಪವಾಸ ಜಾಗರ ಮಾಡಲಿಬೇಕು
ಹರಿ ಭಕುತರ ಕೂಡಿ ಸ್ಮರಿಸಿ ಕುಣಿಯಲು ಬೇಕು
ಹರಿ ನಿಂದಕರ ಸಂಗ ಮಾಳ್ಪರ ಬಿಡಲಿಬೇಕು.

ಹರಿ ಆವ ಕಾಲಕ್ಕೂ ಗತಿಯೆನುತಲಿರಬೇಕು
ಹರಿ ಅನ್ಯರ ಭಜನೆ ದೂರ ಮಾಡಲಿಬೇಕು
ಹರಿ ಚರಣಯುಗಳವ ಸ್ಮರಿಸುತ್ತಲಿರಬೇಕು
ಹರಿದಾಸ ದಾಸರ ಅನುಸರಿಸುತ್ತಿರಬೇಕು.

ಕಂಡು ಕಾಣದಂತೆ ಇಪ್ಪ ಹರಿದಾಸ ಎನಿಸನು
ಪಂಡಿತರೆಂಬೋರವರ ಬಹು ಹೆಮ್ಮೆ ಪಡುವರ
ಭಂಡತನದಲಿ ಹರಿದಾಸರ ದೂಷಿಪರು
ದಂಡ ಮಾಳ್ಪರು ಜನುಮ ದಾಸರೆನಿಸುವರೇ.

ಮಧ್ವನಾಥಗೆ ಸಮಯಿಲ್ಲ ಎಂಬುವನೇ ದಾಸ
ಮಧ್ವರಾಯರ ಉಕ್ತಿ ನಂಬುವವನೇ ದಾಸ
ಮಧ್ವಮತದ ಪದ್ಧತಿ ಬಿಡದವನೇ ದಾಸ
ಮಧ್ವೇಶ ರಾಘವ ವಿಠಲ ಭಜಕನೇ ದಾಸ.

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT