KANDE JAYARAYARA KANDE
ಕಂಡೆ ಜಯರಾಯರ ಕಂಡೆ
ಡಂಡಿ ಪ್ರವರ ನಂದತೀರ್ಥ ದಾಸರ ಕಂಡೆ
ವರ ಕಾಗಿನೀತಟ ಶೋಭಿಪ ಯತಿವರ
ಹರಿದಾಸರುತ್ತಮ ರಾಮ ಪಾದಾರ್ಚಕ
ಸರಿಯಾರು ಕ್ಷಿತಿಯೊಳು ನಿನಗಿನ್ನು ಗುರುವರ
ಪರಮ ಕರುಣೆಯಿಂದ ಶರಣರ ಪೊರೆವರ. 1
ಭವ್ಯ ಸ್ವರೂಪರ ಶರಣರ ಸುರತರು
ದಿವ್ಯ ಹರಿಮಹಿಮಾರ್ಕ ಹೃದಯಾಂಬರದಿ ಧರಿಸಿ
ಸವ್ಯಮತಿ ಮತತಮವ ಅಳಿಸಿ ಅತಿಶೋಭಿಪ
ಅವ್ಯಯ ನ್ಯಾಯ ಸುಧೆಯ ಬುಧರಿಗೆಯಿತ್ತ. 2
ಜ್ಞಾನ ವಿಜ್ಞಾನಾಬ್ಧಿ ಗುಣರತುನ ಪರಿಪೂರ್ಣ
ಮಾನ ವಿರಕ್ತಿ ಭಕ್ತಿ ಮುಕ್ತಾಫಲ ಗಂಭೀರ
ಮಾನಿಜನ ದುಸ್ತರ ಶೇಷಶಯನನ ಧಾಮ
ಮಾನಸ ಶೋಧಿಸಿ ಮಾನದಿಂದಲಿ ಪೊರೆವ. 3
ನಂದತೀರ್ಥರ ವರ ಗಂಭೀರ ಪದಗಳಿಗೆ
ಚೆಂದ ಟೀಕೆಯ ರಚಿಸಿ ಭಾವ ಸುಜನಕೆಯಿತ್ತ
ಮಿಂದು ಏಳುವ ಜನಕೆ ನಂದಾಪಾರವಯೀವ
ಬಂಧ ಕಳೆವ ಗ್ರಂಥ ಜಾತ ಧರೆಗೆ ತಂದ. 4
ಗುರು ಅಕ್ಷೋಭ್ಯರ ಸನ್ನಿಧಾನದಿಯಿರುವ
ಪರಿಪರಿ ಸೇವಿಪ ಜನರ ಉದ್ಧರಿಸುವ
ಧರೆಯೊಳು ತಮ್ಮಯ ಶಾಸ್ತ್ರ ರುಚಿಸುವ ಜನಕೆ
ಡಂಡಿ ಪ್ರವರ ನಂದತೀರ್ಥ ದಾಸರ ಕಂಡೆ
ವರ ಕಾಗಿನೀತಟ ಶೋಭಿಪ ಯತಿವರ
ಹರಿದಾಸರುತ್ತಮ ರಾಮ ಪಾದಾರ್ಚಕ
ಸರಿಯಾರು ಕ್ಷಿತಿಯೊಳು ನಿನಗಿನ್ನು ಗುರುವರ
ಪರಮ ಕರುಣೆಯಿಂದ ಶರಣರ ಪೊರೆವರ. 1
ಭವ್ಯ ಸ್ವರೂಪರ ಶರಣರ ಸುರತರು
ದಿವ್ಯ ಹರಿಮಹಿಮಾರ್ಕ ಹೃದಯಾಂಬರದಿ ಧರಿಸಿ
ಸವ್ಯಮತಿ ಮತತಮವ ಅಳಿಸಿ ಅತಿಶೋಭಿಪ
ಅವ್ಯಯ ನ್ಯಾಯ ಸುಧೆಯ ಬುಧರಿಗೆಯಿತ್ತ. 2
ಜ್ಞಾನ ವಿಜ್ಞಾನಾಬ್ಧಿ ಗುಣರತುನ ಪರಿಪೂರ್ಣ
ಮಾನ ವಿರಕ್ತಿ ಭಕ್ತಿ ಮುಕ್ತಾಫಲ ಗಂಭೀರ
ಮಾನಿಜನ ದುಸ್ತರ ಶೇಷಶಯನನ ಧಾಮ
ಮಾನಸ ಶೋಧಿಸಿ ಮಾನದಿಂದಲಿ ಪೊರೆವ. 3
ನಂದತೀರ್ಥರ ವರ ಗಂಭೀರ ಪದಗಳಿಗೆ
ಚೆಂದ ಟೀಕೆಯ ರಚಿಸಿ ಭಾವ ಸುಜನಕೆಯಿತ್ತ
ಮಿಂದು ಏಳುವ ಜನಕೆ ನಂದಾಪಾರವಯೀವ
ಬಂಧ ಕಳೆವ ಗ್ರಂಥ ಜಾತ ಧರೆಗೆ ತಂದ. 4
ಗುರು ಅಕ್ಷೋಭ್ಯರ ಸನ್ನಿಧಾನದಿಯಿರುವ
ಪರಿಪರಿ ಸೇವಿಪ ಜನರ ಉದ್ಧರಿಸುವ
ಧರೆಯೊಳು ತಮ್ಮಯ ಶಾಸ್ತ್ರ ರುಚಿಸುವ ಜನಕೆ
ಕರೆದು ರಾಘವ ವಿಠಲನಂಘ್ರಿಯೊಳಿಡುವ ದೊರೆಯ. 5
Comments
Post a Comment