BHARATHI BEDUVE KARAMUGIDU

ಭಾರತಿ ಬೇಡುವೆ ಕರಮುಗಿದು ನಿನ್ನನು
ಶ್ರೀರಮಣನ ಗುಣಗಣ ಮತಿಗೆ ಕರುಣಿಸೆ.

ನೀನೊಲಿಯಲು ಏಡಮೂಕ ವಾಗ್ಮಿಯು ನೋಡೆ
ನೀನೊಲಿಯದಿರೆ ವಾಗ್ಮಿ ಮೂಕನಾಗುವ ಗಡ
ಮಾನಸ ವಚನಕೆ ಮಾನಿ ಬೇಡುವೆ ನಿನ್ನ
ಮಾನಸದೊಳಗಿದ್ದು ಉಚಿತ ನುಡಿಸೆ ಮುನ್ನ.  ೧

ಭಕುತಿಗೆ ಮಾನಿಯೆ ಶಾಸ್ತ್ರತತ್ವಂಗಳಲಿ
ರಕುತಿಯನಿತ್ತು ತೋರಬೇಕಮ್ಮ
ಸಕಲದೇವೋತ್ತಮನ ರಾಣೀ ಗೀರ್ವಾಣೀ
ಮಕರಕುಂಡಲಧರನ ಪದಭಕುತಿ ಕರುಣಿಸೆ.   ೨

ಹರಿಕಾರ್ಯಸಾಧಕಿ ಹರಿಮನವ ತಿಳಿಯುತ
ಕುರುಪ ಬೀಳಲು ನಗುತ ದುರುಳಕುಲವನೆ ತರಿದೆ
ಅರಿವು ನೀಡುತ ಎನ್ನ ಬಿಡದೆ ರಕ್ಷಿಸು ತಾಯೆ
ಇರಿಸು ರಾಘವ ವಿಠಲನಂಘ್ರಿಲಿ ರತಿಯನು.  ೩

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha