ELU BHAGAVANTHA ESHTU NIDRE

ಏಳು ಭಗವಂತ ಎಷ್ಟು ನಿದ್ರೆ 
ಏಳು ಸಿರಿವಂತ ಎಷ್ಟು ನಿದ್ರೆ

ರಮೆಯ ಸ್ತುತಿಯ ಕೇಳಿ ತಮವ ಕುಡಿಯಲು ಬೇಕು
ಸಮವ್ಯಾಪ್ತೆ ಸತಿಗಿನ್ನು ನಂದವೀಯಲಿ ಬೇಕು
ಸುಮನಸ ಮುಕುತರ ಕೂಡಿ ನಲಿಯಲು ಬೇಕು
ತಮವ ಪರಿಣಮಿಸುತ ಜಗವ ಸೃಜಿಸಲಿ ಬೇಕು.          

ಅನಂತ ರೂಪದಿ ತಾನು ಜಗವ ನಡೆಸಲಿ ಬೇಕು
ಅನಂತ ಪ್ರದೇಶ ಕಾಲ ವಿಶೇಷಗೊಳಿಸಲು ಬೇಕು
ತನು ಸಂಯೋಜಿಸಿ ಜೀವರ ತರಬೇಕು
ಇನಿತು ಮಹದಾದಿಯ ಸೃಜಿಸಿ ಬೀಗಲಿಬೇಕು.           

ಹಿರಣ್ಯಾಂಡವನು ಕಟ್ಟಿ ವ್ಯಾಪಿಸಿಯಿರಬೇಕು
ಸರಸಿಜವನೆ ಪಡೆದು ಬೊಮ್ಮನ ಪಡೆಯಲಿಬೇಕು
ತರತರ ಸೃಜಿಸುವ ವಿಧಿಯ ನೇಮಿಸಬೇಕು
ಪರಮಪಾವನ ಚರಿತೆ ಜಗದಿ ಹರಡಲಿ ಬೇಕು.         

ಅಜನ ಒಳಹೊಕ್ಕುತ ಜಗವ ಸೃಜಿಸಲಿ ಬೇಕು
ನಿಜರೂಪದಿಂದಲಿ ಜಗವ ಕಾಯಲಿ ಬೇಕು
ಅಜಸುತನ ಒಳಹೊಕ್ಕಿ ಜಗವ ಅಳಿಸಲಿ ಬೇಕು
ಸುಜನರ ಪೊರೆಯುತ ದುರುಳರ ಗೆಲ್ಲಬೇಕು.         

ಪರಿಪರಿ ಭಕುತರ ಪೂಜೆಗ್ರಹಿಸಲು ಬೇಕು
ಪರಿಪರಿ ಭಜಿಪರ ದುರಿತ ಕೀಳಲಿಬೇಕು
ಪರಿಪರಿ ಗತಿಯನ್ನು ಭಕುತರಿಗಿಡಬೇಕು
ಪರಿಸರಪದ್ಧತಿ ರಾಘವ ವಿಠಲ ಏಳು.       

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT