SANGAVAGALI SADHU SADHAVAGALI
ಸಂಗವಾಗಲಿ ಸಾಧುಸಂಗವಾಗಲಿ
ರಂಗನ ದಯದಿ ಭವಭಂಗವಾಗಲಿ.
ಸರುವರುತ್ತಮನು ಹರಿ ಎಂಬೋ ಜಾಣರ
ಸರುವ ನಿಗಮವೇದ್ಯ ಎಂದು ಸಾರಿ ಪೇಳ್ವರ
ಸರುವ ಸುಗುಣಪೂರ್ಣ ದೋಷಲೇಶಹೀನನು
ಸರುವ ಶಕುತ ವಶೀ ಎಂದು ಧೈರ್ಯದಿಸಾರುವ. ೧
ಅಗಣಿತ ಮಹಿಮನು ಸಕಲ ಸೃಜಿಪನು
ಜಗವ ಕಾಯ್ವ ಮತ್ತೆ ಲಯವ ಮಾಳ್ಪ ಚತುರನು
ಖಗವನೇರಿ ಸುತ್ತ ಪೋಪ ಶೇಷಶಯನನು
ಭಗವುಳ್ಳ ಲಕುಮೀನಲ್ಲ ಎಂದು ಪೊಗಳುವ. ೨
ನಲ್ಲೆ ಲಕುಮೀ ಇವನ ಮಹಿಮೆ ಆವ ಕಾಲಕ್ಕೂ
ಬಲ್ಲದಿರಲು ಆವ ಪ್ರಾಣಿ ಮತ್ತೆ ತಿಳಿವನು
ಫುಲ್ಲನಯನ ಕುಡಿಯನೋಟಶಕುತಿಯಿಂದಲಿ
ಎಲ್ಲ ಜಗದ ಕಾರ್ಯ ಸಿರಿಯು ಮಾಳ್ಪರೆಂಬರ. ೩
ಸಕಲ ಜೀವರುತ್ತಮನು ವಾಯುಯೆಂಬರ
ಪ್ರಕಟ ಹನುಮ ಭೀಮ ಮಧ್ವ ಮುನಿಯ ಭಕ್ತರ
ವಿಕಲಮತಿ ಅವರ ಮತ ದ್ವೇಷ ಮಾಳ್ಪರ
ಸಕಲ ಕಾಲದಲ್ಲು ಹರಿಯ ಸ್ಮರಿಸುತಿಪ್ಪರ. ೪
ಬೊಮ್ಮವಾಯುರುದ್ರಇಂದ್ರ ಮೊದಲು ತ್ರಿದಶರ
ಹೆಮ್ಮೆಯಿಂದ ತಾರತಮ್ಯ ತಿಳಿದು ಭಜಿಪರ
ಒಮ್ಮನದಿಂದ ಸಕಲ ದಾಸವರ್ಗವ
ಉಮ್ಮಯದಿಂದ ಪಾಡಿ ಪೊಗಳಿ ನಲಿವರ. ೫
ನಿಂದಾಸ್ತುತಿ ಜಯಾಜಯ ಲಾಭಾಲಾಭವ
ಎಂದು ಹರಿಯ ವಶವೆಂದು ತಿಳಿದು ನಡೆವರ
ಕುಂದು ಬರದಂತೆ ಧರ್ಮ ಮಾಡಿ ನಲಿವರ
ಎಂದು ಕಷ್ಟದಲ್ಲೂ ಧರ್ಮ ಬಿಡದೆ ಮಾಳ್ಪರ. ೬
ಪಂಚಭೇದ ಸತ್ಯ ಜಗತು ಎಂದು ಅರುಹುವ
ಪಂಚಬಾಣ ವಶಕೆ ಸಿಲುಕದಂಥ ಧೀರರ
ಪಂಚಪ್ರಾಣರಲ್ಲಿ ನಿಂತು ಲೋಕಯಾತ್ರೆಯ
ರಂಗನ ದಯದಿ ಭವಭಂಗವಾಗಲಿ.
ಸರುವರುತ್ತಮನು ಹರಿ ಎಂಬೋ ಜಾಣರ
ಸರುವ ನಿಗಮವೇದ್ಯ ಎಂದು ಸಾರಿ ಪೇಳ್ವರ
ಸರುವ ಸುಗುಣಪೂರ್ಣ ದೋಷಲೇಶಹೀನನು
ಸರುವ ಶಕುತ ವಶೀ ಎಂದು ಧೈರ್ಯದಿಸಾರುವ. ೧
ಅಗಣಿತ ಮಹಿಮನು ಸಕಲ ಸೃಜಿಪನು
ಜಗವ ಕಾಯ್ವ ಮತ್ತೆ ಲಯವ ಮಾಳ್ಪ ಚತುರನು
ಖಗವನೇರಿ ಸುತ್ತ ಪೋಪ ಶೇಷಶಯನನು
ಭಗವುಳ್ಳ ಲಕುಮೀನಲ್ಲ ಎಂದು ಪೊಗಳುವ. ೨
ನಲ್ಲೆ ಲಕುಮೀ ಇವನ ಮಹಿಮೆ ಆವ ಕಾಲಕ್ಕೂ
ಬಲ್ಲದಿರಲು ಆವ ಪ್ರಾಣಿ ಮತ್ತೆ ತಿಳಿವನು
ಫುಲ್ಲನಯನ ಕುಡಿಯನೋಟಶಕುತಿಯಿಂದಲಿ
ಎಲ್ಲ ಜಗದ ಕಾರ್ಯ ಸಿರಿಯು ಮಾಳ್ಪರೆಂಬರ. ೩
ಸಕಲ ಜೀವರುತ್ತಮನು ವಾಯುಯೆಂಬರ
ಪ್ರಕಟ ಹನುಮ ಭೀಮ ಮಧ್ವ ಮುನಿಯ ಭಕ್ತರ
ವಿಕಲಮತಿ ಅವರ ಮತ ದ್ವೇಷ ಮಾಳ್ಪರ
ಸಕಲ ಕಾಲದಲ್ಲು ಹರಿಯ ಸ್ಮರಿಸುತಿಪ್ಪರ. ೪
ಬೊಮ್ಮವಾಯುರುದ್ರಇಂದ್ರ ಮೊದಲು ತ್ರಿದಶರ
ಹೆಮ್ಮೆಯಿಂದ ತಾರತಮ್ಯ ತಿಳಿದು ಭಜಿಪರ
ಒಮ್ಮನದಿಂದ ಸಕಲ ದಾಸವರ್ಗವ
ಉಮ್ಮಯದಿಂದ ಪಾಡಿ ಪೊಗಳಿ ನಲಿವರ. ೫
ನಿಂದಾಸ್ತುತಿ ಜಯಾಜಯ ಲಾಭಾಲಾಭವ
ಎಂದು ಹರಿಯ ವಶವೆಂದು ತಿಳಿದು ನಡೆವರ
ಕುಂದು ಬರದಂತೆ ಧರ್ಮ ಮಾಡಿ ನಲಿವರ
ಎಂದು ಕಷ್ಟದಲ್ಲೂ ಧರ್ಮ ಬಿಡದೆ ಮಾಳ್ಪರ. ೬
ಪಂಚಭೇದ ಸತ್ಯ ಜಗತು ಎಂದು ಅರುಹುವ
ಪಂಚಬಾಣ ವಶಕೆ ಸಿಲುಕದಂಥ ಧೀರರ
ಪಂಚಪ್ರಾಣರಲ್ಲಿ ನಿಂತು ಲೋಕಯಾತ್ರೆಯ
ಪಂಚಮೂರ್ತಿ ರಾಘವ ವಿಠಲ ಮಾಡ್ವನೆಂಬರ. ೭
Comments
Post a Comment