Ekadashi Mahime

ಹರಿದಿನಕೆ ಸಮವಾದ ದಿನವಿಲ್ಲ
ಅರಿಷಡ್ವರ್ಗವ ತರಿದು ಬಿಸುಟುವ

ದಶಮಿ ದಿನ ಬರಲು ವಿಷಯದಾಶೆಯ ತೊರೆದು
ಕೇಶವ ಎನುತಲಿ ನಿಯಮಕೈಗೊಂಡು
ಶೇಷಶಯನನೆ ತ್ರಿದಿನವ್ರತವನ್ನೆ
ಆಶೆಯಿಂದಲಿ ಮಾಳ್ಪೆ ವಿಘ್ನವ ಕಳೆಯೆನ್ನಿ. ೧

ಏಕಾದಶಿಯಂದು ದಂತಶೋಧನೆ ಸಲ್ಲ
ವಾಕು ವ್ಯರ್ಥ ತ್ಯಜಿಸಿ ಉಷ್ಣೋದಕವ ತೊರೆದು 
ಕಾಕುಮತಿಯ ಬಿಟ್ಟು ತ್ವರಿತ ತನು ಶೋಧಿಸಿ
ಹಕ್ಕಿವಾಹನ ಸಿರಿ ಲೋಲನ ಅರ್ಚಿಸಿ. ೨

ಹಗಲು ನಿದ್ದೆಯು ಮೈಥುನ ಭೋಜನ
ಯೋಗ್ಯವಲ್ಲವು ತಾಂಬೂಲ ತೈಲವು
ಪಾಲ್ಗಡಲಶಾಯಿಯ ಮೆಚ್ಚಿಸಿ ಪೂಜಿಸಿ
ನೀಗಿಸಿ ಪಾಪವ ಹರಿಯ ಕರುಣೆಲಿ. ೩

ಭಾಗವತರ ಕೂಡಿ ನಲಿದು ಕುಣಿಯುತ
ಜಾಗರ ಮಾಡುತ ತರತಮ ನೆನೆಯುತ
ಯುಗಳ ರಹಿತನ ಸಾಸಿರನಾಮದಿ
ಯೋಗದಿ ತುತಿಸಲು ಪಾಪಗಳಳಿವುವು. ೪

ಹಗಲು ಪೂಜಿಸಿ ಭುಂಜಿಸಿ ಕಾಲದಿ
ಅಗಮ್ಯ ಮಹಿಮಗೆ ಪುಣ್ಯವನರ್ಪಿಸಿ
ರಾಘವವಿಠಲನು ಜ್ಞಾನವ ಕೊಡುವನು
ಹಿಗ್ಗುತ ಮುಕುತಿಲಿ ನಿರುತ ಒಲೈಸುವ. ೫

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha