SHUBHAKRUT
ಶುಭಕೃತ್
ಯುಗದ ಪ್ರೇರಕ ಆದಿ ಪುರುಷನು
ಯುಗಾದಿಕೃತನು ರಮೆಯ ಅರಸನು
ಯುಗದವರ್ತಕನೆಂದು ಕರೆಸುವ ವಿಶ್ವ ನಾಮಕನು.
ಯುಗಳದೂರನೆ ದೈತ್ಯರನು ಸಂ
ಯುಗದಿ ಓಡಿಸಿ ನಿಜರ ಪಿಡಿ ಮೂರ್
ಯುಗನೆ ನಿನ್ನಯ ಸ್ಮರಣೆ ನೀಡುತ ಎಮ್ಮ ರಕ್ಷಿಪುದು.
ನಿಗಮ ಗೋಚರ ಅಚರ ಮಹಿಮನೆ
ಜಗಕೆ ನಾಥನೆ ಸಿಂಧು ಶಯನನೆ
ಅಗವ ಧರಿಸಿದ ಬಾಲ ಕೃಷ್ಣನೆ ನಮಿಪೆ ಅನುದಿನವೂ.
ಖಗಸುವಾಹನ ಮನವ ಶೋಧಿಸಿ
ಬಗೆಬಗೆಮಹಿಮೆ ಚಿತ್ತದಿರುಸುತ
ಉಗಮ ರಹಿತನೆ ಸಲಹೊ ದೇವನೆ ಭಕ್ತವತ್ಸಲನೆ.
ಶುಭಸುಗುಣಗಣ ಪೂರ್ಣ ಸುಭಗನು
ಶುಭವ ನಿರುತದಿ ಮಾಳ್ಪ ಸುಜನಕೆ
ಶುಭವ ಛೇದಿಸುತಿಪ್ಪ ಲೀಲೆಲಿ ದುರುಳ ಜನಗಳಿಗೆ
ಶುಭವ ಭುಂಜಿಪ ಅಶುಭ ಮುಟ್ಟನು
ಶುಭವು ದೇಹವು ಪ್ರಕೃತಿ ದೂರನು
ಯುಗದ ಪ್ರೇರಕ ಆದಿ ಪುರುಷನು
ಯುಗಾದಿಕೃತನು ರಮೆಯ ಅರಸನು
ಯುಗದವರ್ತಕನೆಂದು ಕರೆಸುವ ವಿಶ್ವ ನಾಮಕನು.
ಯುಗಳದೂರನೆ ದೈತ್ಯರನು ಸಂ
ಯುಗದಿ ಓಡಿಸಿ ನಿಜರ ಪಿಡಿ ಮೂರ್
ಯುಗನೆ ನಿನ್ನಯ ಸ್ಮರಣೆ ನೀಡುತ ಎಮ್ಮ ರಕ್ಷಿಪುದು.
ನಿಗಮ ಗೋಚರ ಅಚರ ಮಹಿಮನೆ
ಜಗಕೆ ನಾಥನೆ ಸಿಂಧು ಶಯನನೆ
ಅಗವ ಧರಿಸಿದ ಬಾಲ ಕೃಷ್ಣನೆ ನಮಿಪೆ ಅನುದಿನವೂ.
ಖಗಸುವಾಹನ ಮನವ ಶೋಧಿಸಿ
ಬಗೆಬಗೆಮಹಿಮೆ ಚಿತ್ತದಿರುಸುತ
ಉಗಮ ರಹಿತನೆ ಸಲಹೊ ದೇವನೆ ಭಕ್ತವತ್ಸಲನೆ.
ಶುಭಸುಗುಣಗಣ ಪೂರ್ಣ ಸುಭಗನು
ಶುಭವ ನಿರುತದಿ ಮಾಳ್ಪ ಸುಜನಕೆ
ಶುಭವ ಛೇದಿಸುತಿಪ್ಪ ಲೀಲೆಲಿ ದುರುಳ ಜನಗಳಿಗೆ
ಶುಭವ ಭುಂಜಿಪ ಅಶುಭ ಮುಟ್ಟನು
ಶುಭವು ದೇಹವು ಪ್ರಕೃತಿ ದೂರನು
ಶುಭದನಾಗಲಿ ಜನಕೆ ಶುಭಕೃತು ರಾಘವವಿಠಲನು
Comments
Post a Comment