BHARATHI BEDUVE KARAMUGIDU
ಭಾರತಿ ಬೇಡುವೆ ಕರಮುಗಿದು ನಿನ್ನನು ಶ್ರೀರಮಣನ ಗುಣಗಣ ಮತಿಗೆ ಕರುಣಿಸೆ. ನೀನೊಲಿಯಲು ಏಡಮೂಕ ವಾಗ್ಮಿಯು ನೋಡೆ ನೀನೊಲಿಯದಿರೆ ವಾಗ್ಮಿ ಮೂಕನಾಗುವ ಗಡ ಮಾನಸ ವಚನಕೆ ಮಾನಿ ಬೇಡುವೆ ನಿನ್ನ ಮಾನಸದೊಳಗಿದ್ದು ಉಚಿತ ನುಡಿಸೆ ಮುನ್ನ. ೧ ಭಕುತಿಗೆ ಮಾನಿಯೆ ಶಾಸ್ತ್ರತತ್ವಂಗಳಲಿ ರಕುತಿಯನಿತ್ತು ತೋರಬೇಕಮ್ಮ ಸಕಲದೇವೋತ್ತಮನ ರಾಣೀ ಗೀರ್ವಾಣೀ ಮಕರಕುಂಡಲಧರನ ಪದಭಕುತಿ ಕರುಣಿಸೆ. ೨ ಹರಿಕಾರ್ಯಸಾಧಕಿ ಹರಿಮನವ ತಿಳಿಯುತ ಕುರುಪ ಬೀಳಲು ನಗುತ ದುರುಳಕುಲವನೆ ತರಿದೆ ಅರಿವು ನೀಡುತ ಎನ್ನ ಬಿಡದೆ ರಕ್ಷಿಸು ತಾಯೆ ಇರಿಸು ರಾಘವ ವಿಠಲನಂಘ್ರಿಲಿ ರತಿಯನು. ೩