NARAYANA DEVA
ರೂಪಕ ತಾಳ.
ನಾರಾಯಣ ದೇವ ಮತ್ತೆ ಮನೆ ಮಾಡಿದ
ನೀರಜಾಕ್ಷನ ಮಹಿಮೆ ಕೇಳಿರಯ್ಯಾ
ಒಂಭತ್ತು ಅಂಗಳ ತಪನೀಯ ಕುಡ್ಯವು
ತುಂಬಿತು ಈರೇಳು ಉಪ್ಪರಿಗೆಗಳು
ಬಾಂಬೊಳೆ ಸ್ವರ್ಣಗಿರಿ ಚಿತ್ರಾಬ್ಧಿ ದ್ವೀಪಗಳು
ಎಂಭತ್ತು ಲಕ್ಷಕಧಿ ಜಂತು ರೀತಿಗಳು. ೧
ತರಣಿ ಚಂದಿರ ದ್ವಿಜ ಮೇಘವಲಯವು
ಸರಿತು ನದ ವ್ಯೋಮ ಹುತವಹ ಮಾರುತ
ಧರಣಿಯೊಳು ಚಿತ್ರ ಕ್ಷೇತ್ರ ತೀರ್ಥಂಗಳು
ಪರಿಪರಿ ಸರ್ಗವ ಮಾಡಿ ಗತಿಗಳಯೀವ . ೨
ಮೂರು ಪೊಳೆವ ಕೋಣೆ ಒಂದು ಕತ್ತಲು ಕೋಣೆ
ಸೇರಿಸಿ ವಸ್ತುಗಳ ಒಪ್ಪ ಓರಣವಾಗಿ
ಈರ ತಾತಗೆ ರಾಘವ ವಿಠಲನಾಟಕ್ಕೆ
ನಾರಾಯಣ ದೇವ ಮತ್ತೆ ಮನೆ ಮಾಡಿದ
ನೀರಜಾಕ್ಷನ ಮಹಿಮೆ ಕೇಳಿರಯ್ಯಾ
ಒಂಭತ್ತು ಅಂಗಳ ತಪನೀಯ ಕುಡ್ಯವು
ತುಂಬಿತು ಈರೇಳು ಉಪ್ಪರಿಗೆಗಳು
ಬಾಂಬೊಳೆ ಸ್ವರ್ಣಗಿರಿ ಚಿತ್ರಾಬ್ಧಿ ದ್ವೀಪಗಳು
ಎಂಭತ್ತು ಲಕ್ಷಕಧಿ ಜಂತು ರೀತಿಗಳು. ೧
ತರಣಿ ಚಂದಿರ ದ್ವಿಜ ಮೇಘವಲಯವು
ಸರಿತು ನದ ವ್ಯೋಮ ಹುತವಹ ಮಾರುತ
ಧರಣಿಯೊಳು ಚಿತ್ರ ಕ್ಷೇತ್ರ ತೀರ್ಥಂಗಳು
ಪರಿಪರಿ ಸರ್ಗವ ಮಾಡಿ ಗತಿಗಳಯೀವ . ೨
ಮೂರು ಪೊಳೆವ ಕೋಣೆ ಒಂದು ಕತ್ತಲು ಕೋಣೆ
ಸೇರಿಸಿ ವಸ್ತುಗಳ ಒಪ್ಪ ಓರಣವಾಗಿ
ಈರ ತಾತಗೆ ರಾಘವ ವಿಠಲನಾಟಕ್ಕೆ
ಸೇರಿ ದಿವಿಜರೆಲ್ಲ ಕಟ್ಟಿದಂತಹ ಮನೆ. ೩
Comments
Post a Comment