KSHEERABDHI SANJATE
ಕ್ಷೀರಾಬ್ಧಿಸಂಜಾತೆ ತ್ರೈಲೋಕ್ಯಸನ್ಮಾತೆ
ಈರಾಖ್ಯಸತ್ಪುತ್ರೆ ಮಾರಜನನಿ ಖ್ಯಾತೆ
ಮಾಯೆ ಜಯೆ ಕೃತಿ ಶಾಂತೆ ಸುರಸನ್ನುತೆ
ಶ್ರಿಯೆ ಭೂಮಿ ದುರ್ಗೆಯೆ ತ್ರಿಗುಣನಿಯಾಮಿಕೆ
ಜಯಂತಿ ದಕ್ಷಿಣೆ ಅರ್ಚಿ ಸೀತೆ ರುಗ್ಮಿಣಿ ಹರಿ
ಪ್ರೀಯೆ ಸತ್ಯ ಭಾಮೆ ಸ್ವರೂಪಳೆ ನಮಿಪೆನು. ೧
ಪ್ರಲಯಕಾಲದಿ ಹರಿ ಸಾಮೀಪ್ಯವತಿ ಪೊಂದಿ
ಜಲ ಪತ್ರ ತಮವಾಗಿ ಬಿಡದಲೆ ಸೇವಿಪೆ
ಬಲುವಿಧ ಶೃತಿ ಸ್ತೋಮದಿಂದಲಿ ಪೊಗಳುವೆ
ಕಳೆಯಲು ವಿಧಿನಿಶೆ ಪೊಗಳಿ ಪ್ರಬೋಧಿಪೆ. ೨
ಪುರುಷ ಪ್ರಕೃತಿ ಸೂತ್ರ ಶ್ರದ್ಧಾ ಜನನಿ ನಮಿಪೆ
ಪುರುರೂಪದಿಂದಲಿ ಹರಿಯ ಸೇವೆಯ ಗೈವೆ
ಪರತಂತ್ರ ಸಮವ್ಯಾಪ್ತೆ ನಿತ್ಯ ಮುಕ್ತೆ ಶಕ್ತೆ
ಪರಶುಕ್ಲರೂಪಳೆ ಯೋಗ್ಯ ಪದಸಂಪ್ರದಳೆ. ೩
ಹರಿಯ ಎರಡೊಂದು ರೂಪದಿಂದಲಿ ಪಡೆಯುವೆ
ಹರಿ ವೀರ್ಯವಿಡಲಾಗಿ ಬೊಮ್ಮಾಂಡ ಹಡೆಯುವೆ
ಹರಿ ಗುಣ ರೂಪ ಕ್ರಿಯೆ ಗಳ ನಿತ್ಯನೂತನ ಕಂಡು
ಈರಾಖ್ಯಸತ್ಪುತ್ರೆ ಮಾರಜನನಿ ಖ್ಯಾತೆ
ಮಾಯೆ ಜಯೆ ಕೃತಿ ಶಾಂತೆ ಸುರಸನ್ನುತೆ
ಶ್ರಿಯೆ ಭೂಮಿ ದುರ್ಗೆಯೆ ತ್ರಿಗುಣನಿಯಾಮಿಕೆ
ಜಯಂತಿ ದಕ್ಷಿಣೆ ಅರ್ಚಿ ಸೀತೆ ರುಗ್ಮಿಣಿ ಹರಿ
ಪ್ರೀಯೆ ಸತ್ಯ ಭಾಮೆ ಸ್ವರೂಪಳೆ ನಮಿಪೆನು. ೧
ಪ್ರಲಯಕಾಲದಿ ಹರಿ ಸಾಮೀಪ್ಯವತಿ ಪೊಂದಿ
ಜಲ ಪತ್ರ ತಮವಾಗಿ ಬಿಡದಲೆ ಸೇವಿಪೆ
ಬಲುವಿಧ ಶೃತಿ ಸ್ತೋಮದಿಂದಲಿ ಪೊಗಳುವೆ
ಕಳೆಯಲು ವಿಧಿನಿಶೆ ಪೊಗಳಿ ಪ್ರಬೋಧಿಪೆ. ೨
ಪುರುಷ ಪ್ರಕೃತಿ ಸೂತ್ರ ಶ್ರದ್ಧಾ ಜನನಿ ನಮಿಪೆ
ಪುರುರೂಪದಿಂದಲಿ ಹರಿಯ ಸೇವೆಯ ಗೈವೆ
ಪರತಂತ್ರ ಸಮವ್ಯಾಪ್ತೆ ನಿತ್ಯ ಮುಕ್ತೆ ಶಕ್ತೆ
ಪರಶುಕ್ಲರೂಪಳೆ ಯೋಗ್ಯ ಪದಸಂಪ್ರದಳೆ. ೩
ಹರಿಯ ಎರಡೊಂದು ರೂಪದಿಂದಲಿ ಪಡೆಯುವೆ
ಹರಿ ವೀರ್ಯವಿಡಲಾಗಿ ಬೊಮ್ಮಾಂಡ ಹಡೆಯುವೆ
ಹರಿ ಗುಣ ರೂಪ ಕ್ರಿಯೆ ಗಳ ನಿತ್ಯನೂತನ ಕಂಡು
ಪರಿಪರಿ ಹಿಗ್ಗುವ ಭಾಗ್ಯೆ ಅವಗುಣ ಕಳೆಯೆ. ೪
ಸಕಲ ವಾಙ್ಮನ ದೇವಿ ಸಕಲಭಾಗ್ಯದಾತೆ
ಲಕುಮಿ ಲಕ್ಷಣ ಭರಿತೆ ಭಕುತ ಇಷ್ಟದಾತೆ
ಅಕಳಂಕ ಚರಿತಳೆ ಶಿರಬಾಗಿ ಬೇಡುವೆ
ಕೃಕಲೇಶನನು ತೋರೆ ಹೃದಯ ಮಂದಿರದೊಳಗೆ. ೫
ಸ್ವರ್ಣ ಭೂಷಣೆ ಸ್ವರ್ಣವರ್ಣೆ ಸುಗುಣ ಗಣ
ಪೂರ್ಣೆ ಋಜುಗಣ ಕರಸೇವಿತ ಚರಣೆ
ವರ್ಣ ಸ್ವರ ಪದ ರೂಪ ನಿತ್ಯಾರ್ಣ ಧೇನಿಪೆ
ಅರ್ಣವ ಸುತೆಯಳೆ ಜಾಣೆ ಎಣೆಗಾಣೆ. ೬
ತ್ರಿಧಾಮ ಸ್ವರೂಪಳೆ ವಿರಜೆ ಸರ್ವಜ್ಞಳೆ
ರಾಧಾ ಗೋಲೋಕದಿ ದುರಿತ ಕಳೆಯೆ ತಾಯೆ
ಬಾಧೆ ಕಳೆದು ಕಾಯ ಮನವ ಸಂಶೋಧಿಸೆ
ಸಕಲ ವಾಙ್ಮನ ದೇವಿ ಸಕಲಭಾಗ್ಯದಾತೆ
ಲಕುಮಿ ಲಕ್ಷಣ ಭರಿತೆ ಭಕುತ ಇಷ್ಟದಾತೆ
ಅಕಳಂಕ ಚರಿತಳೆ ಶಿರಬಾಗಿ ಬೇಡುವೆ
ಕೃಕಲೇಶನನು ತೋರೆ ಹೃದಯ ಮಂದಿರದೊಳಗೆ. ೫
ಸ್ವರ್ಣ ಭೂಷಣೆ ಸ್ವರ್ಣವರ್ಣೆ ಸುಗುಣ ಗಣ
ಪೂರ್ಣೆ ಋಜುಗಣ ಕರಸೇವಿತ ಚರಣೆ
ವರ್ಣ ಸ್ವರ ಪದ ರೂಪ ನಿತ್ಯಾರ್ಣ ಧೇನಿಪೆ
ಅರ್ಣವ ಸುತೆಯಳೆ ಜಾಣೆ ಎಣೆಗಾಣೆ. ೬
ತ್ರಿಧಾಮ ಸ್ವರೂಪಳೆ ವಿರಜೆ ಸರ್ವಜ್ಞಳೆ
ರಾಧಾ ಗೋಲೋಕದಿ ದುರಿತ ಕಳೆಯೆ ತಾಯೆ
ಬಾಧೆ ಕಳೆದು ಕಾಯ ಮನವ ಸಂಶೋಧಿಸೆ
ಬೋಧವಿತ್ತು ಕಾಯೆ ರಾಘವ ವಿಠಲ ರಾಣಿ. ೭
Comments
Post a Comment