KATIYALLI KARAVITTANU

ಕಟಿಯಲ್ಲಿ ಕರವಿಟ್ಟೆಯೋ ಕಾರಣವೇನು 
ಪಟು ಪಂಢರಿರಾಯ ಸೂಸಿ ಪೇಳೆಲೋ ಈಗ

ಅನಾದಿ ಕಾಲದಿ ನಿತ್ಯಾನಂತ ಬ್ರಹ್ಮಾಂಡ ಸೃಜಿಸಿ
ಮನಕೆ ಬಂದ ತೆರದಿ ಜೀವಗಣಗಳ  ಕುಣಿಸಿ
ಅನುಗುಣ ಫಲಗಳ ಜೀವರಾಶಿಗೆ ಇರಿಸಿ
ಅನುಪಮ ಮಹಿಮನೆ ಶ್ರಮದಿಂದಲೇನು ಪ್ರಭುವೇ.  

ನಿನ್ನ ಭಜಿಪ ಭಕುತ ಜನರನುಸರಿಸಿ ನಿತ್ಯ
ಬನ್ನ ವಿವಿಧ  ಕಳೆದು ಅಮೃತ  ಛಾಯೆಲಿ ಪೊರೆವ
ನಿನ್ನ ವ್ರತವ ಸತ್ಯ ಮಾಡಲಾನಂತ ರೂಪ
ವನ್ನು ಧರಿಸಿ ಹಿಂದೆ ಹೋಗಿ ಹೋಗಿ ಶ್ರಮವೇ.          

ಪರಿ ಪರಿ ಭಕುತರನೇಕ ಸಂಖ್ಯೆಲಿ ನಿತ್ಯ
ಚರಣ ದ್ವಂದ್ವವ ಪಿಡಿದು ಶರಣು ಎನ್ನಲು ಸ್ವಾಮಿ
ದುರಿತ ತೂಲವ ದಹಿಸಿ ಪಾರುಗಾಣಿಸಿ ಶ್ರಮವೆ
ಪರಮ ಪುರುಷನೆ ಕಾಯೋ ರಾಘವ ವಿಠಲನೆ.

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT