BRASHTANA MADADIRO

ಭ್ರಷ್ಟನ ಮಾಡದಿರೋ ಎನ್ನ ಸ್ವಾಮಿ
ಇಷ್ಟದ ದೈವನೆ ಕಷ್ಟವ ಬಿಡಿಸೋ.

ಏನೇನು ಯೋನಿಗಳ್ ಕಷ್ಟದಿ ದಾಟುತ
ಮಾನವ ಜನುಮವು ಬಹು ದುರ್ಲಭ ಒದಗಿರೆ
ಹೀನ ಕೃತ್ಯಗಳೆಸಗಿ ಮೂಢ ನರಕಕೆ ಆದೆ
ದೀನ ಜನಗಳ ಬಂಧು ಕರ ಪಿಡಿದು ಕಾಯೋ.

ಕರ್ಮದ ಮರ್ಮವ ಅರಿಯದೆ ಕೆಟ್ಟೆನೋ ನಿನ್ನ
ವರ್ಮದ ಬಲವನು ಹೊಂದಿಸಿ ಸಲಹೋ
ಕರ್ಮಂದಿ ಅರಸನೆ ಕರ್ಮವ ಸವಿಸೋ
ಶರ್ಮದೊಳಿರಿಸಿ ಬಿರುದನ್ನು ಉಳಿಸೋ.

ಚಿತ್ತದ ವೃತ್ತಿಯು ಬಹುವಿಧವಹುದೋ
ಮತ್ತೆ ಪರರ ಜರಿದು ಚಪಲವಚನವಾಡಿ
ಅತ್ತಿತ್ತ ತಿರುಗುತ ನೆಲೆಗಾಣದಾದೆನೋ
ಚಿತ್ತಜನಯ್ಯನೆ ಕರ ಪಿಡಿದು ಕಾಯೋ.

ಸಂಸಾರ ವೀಥಿಯು ಭೀತಿ ಗೋಜಲು ಪೂರ್ಣ 
ಕಂಸಾರಿ ಜನಾರ್ದನ ತ್ವರಿತದಿ ಕರುಣಿಸೋ 
ಹಿಂಸೆ ಯಮನ ಪುರದಿ ಘೋರ ಬೇಡೆಲೋ ವಿಪ
ಅಂಸಗ ದಾರಿಯ ತೋರಿ ಕ್ಷೇಮಕೆ ನಡೆಸೋ.

ಆಚಾರವಿಲ್ಲವು ಎನ್ನುತ ಬಿಡದಿರೋ
ವಿಚಾರಹೀನನು ಎಂದುಪೇಕ್ಷೆ ಸಲ್ಲದೋ
ಆಚಾರ್ಯ ಮಧ್ವರ ವಿಶ್ವಾಸಿ ಎನುತಲಿ
ಗೋಚಾರಕನೆ ಕಾಯೋ ರಾಘವ ವಿಠಲನೆ.

Comments

Popular posts from this blog

MADIVANTARU UNABAHUDANNA

SHUBHAKRUT

Hiriya Daivavu Jagadi