PURANDARA DASARU

ಗುರು ಪುರಂದರ ದಾಸರ ನೀ ಬಿಡದೆ ಭಜಿಸೆಲೋ ಮಾನವ
ಉರಿವ ಭವದ ತಾಪತ್ರಯಗಳ ಒಡನೆ ಅಳಿಸುವ ಕರುಣಿಯ

ದೇವಗಾಯಕ ಚಿತ್ರ ಮಹಿಮನು ದೇವದೇವನ ಮಹಿಮೆಯ
ಆವ ಕಾಲಕು ಬ್ರಹ್ಮ ಸದನದಿ ಚೆಂದ ಪದದಿಂ ಪಾಡುವ
ದೇವ ಋಷಿಯು ಹರಿಯ ಆಜ್ಞೆಲಿ ವಸುಧೆಯೊಳು ತಾ ನೆಲೆಸಿದ
ಭಾವ ತೋರಿದ ಶಾಸ್ತ್ರ ಕೃತಿಗಳ ದಾಸರಾಯನು ಎನಿಸುತ.  ೧

ಸಕಲ ಲೋಕಗಳಟನ ಮಾಳ್ಪನು ನಿಷ್ಕಳಂಕ ಚರಿತನು
ಸಕಲದೇವಕಾರ್ಯಸಾಧಕ ಸಕಲಲೋಕದಿ ಪೂಜಿತ
ವಿಕಲ ಮತಿಗಳು ಜರಿದು ಇವರ ಖೇದ ಪಡುವರು ನಿಶ್ಚಿತ
ಸಕಲ ಭಾಗ್ಯವನೀವ ನಾರದ ಭುವಿಯೊಳಿಂತು ವಾಸಿಪ. ೨

ವ್ಯಾಸರಾಯರ ಶಿಷ್ಯನೆನಿಸುತ ಮಹಿಮೆ ಬಹುಲ ತೋರುತ
ವಾಸುದೇವನೆ ಪರಮ ದೈವನು ಎಂದು ಜಗದಿ ಸಾರಿದ
ವ್ಯಾಸದೇವನ ಸೂತ್ರ ತತ್ವವ ಲಲಿತ ಪದದಲಿ ಪಾಡುತ
ಬೇಸತ್ತು ಭವದಲಿ ಶರಣು ಹೊಕ್ಕ ನರರ ದಡಕೆ ಹಾಕುವ.   ೩

ಸುರರ ಮುನಿಯು ಭಜಿಸಿ ಕೃಷ್ಣನ ಒಮ್ಮೆ ಇಂತು ಕೇಳಲು
ಧರೆಲಿ ದಾಸನು ಆದ ಕಾಲಕೆ ಎನ್ನ ಕೂಡಿ ಕ್ರೀಡಿಸು
ಪರಮ ಕರುಣಿ ಪಾಂಡುರಂಗನು ವಿವಿಧ ಕ್ರೀಡೆಯ ತೋರಿದ
ವರದ ಶ್ರೀ ಹರಿ ಪೂರ್ಣ ಒಲುಮೆಗೆ ಪಾತ್ರನೆಂದು ‌ಸ್ಮರಿಸುತ.  ೪

ತ್ಯಾಗಿ ವೃಷಭನು ನಿರುತ ಕೃಷ್ಣನ ಭೋಗಿ ಶಯನನ  ಮಹಿಮೆಯ
ರಾಗದಿಂದಲಿ ಪಾಡಿಪೊಗಳುತ ಆಗಮಾರ್ಥನ ಕಂಡನು
ಜಾಗು ಮಾಡದೆ ಭಜಿಪ ಜನಗಳ ಬೇಗೆ ಸೃತಿಯಲಿ ಕಳೆಯುತ
ವೇಗದಿಂದಲಿ ಮನಕೆ ತಂದು ರಾಘವ ವಿಠಲನ ಕೂಡಿಸು.  ೫

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT