Allane nammaneya daiva

ಅಲ್ಲನೇ ನಮ್ಮನೆಯ ದೈವ ಅಲ್ಲ ಇಲ್ಲದೆ ಬದುಕೇ ಇಲ್ಲ
ಬಲ್ಲಿದ ಜನ ಕೇಳಿ ಸಿರಿಯ ನಲ್ಲನಲ್ಲದೆ ಪರದೈವವಿಲ್ಲ.

ಪ್ರಕೃತಿಯು ತಾನಲ್ಲ ಮಹತ್ತು ತಾನಲ್ಲ 
ವಿಕೃತಿಯು ತಾನಲ್ಲ ಭೌತಿಕ ತಾನಲ್ಲ
ಪ್ರಾಕೃತ ತಾನಲ್ಲ ಪಾರ್ಥಿವ ತಾನಲ್ಲ
ಸುಕೃತಿಗಳೊಡೆಯ ಏನಲ್ಲ ಶ್ರುತಿ ಬಲ್ಲ.          ೧

ದಾನವ ತಾನಲ್ಲ ರಕ್ಕಸ ತಾನಲ್ಲ
ಮಾನವ ತಾನಲ್ಲ ದೇವತೆ ತಾನಲ್ಲ
ಮೌನಿಯು ತಾನಲ್ಲ ರಾಜನು ತಾನಲ್ಲ
ಜ್ಞಾನರೂಪನು ತಾನು ಏನಲ್ಲ ಏನಲ್ಲ.           ೨

ತಾನಲ್ಲ ಪುರುಷನು ತಾನಲ್ಲ ಮಹಿಳೆಯು 
ತಾನಲ್ಲ ಷಂಡನು ತಾನಲ್ಲ ಜಂತುವು 
ತಾನಲ್ಲ ನಿರ್ಗುಣ ತನಗಿಲ್ಲ ಗುಣಗಳು  
ಏನಿಲ್ಲದಿರುವಾಗ್ಯು ಇಲ್ಲದೆ ಇರಲಿಲ್ಲ.            ೩

ತಾನಿರದ ಸ್ಥಳವಿಲ್ಲ ತನಗಿರದ ಪೆಸರಿಲ್ಲ
ತಾನಿರದೆ ಯಾರಿಲ್ಲ ತನ್ನಿಂದ ಇಲ್ಲಿ ಎಲ್ಲ
ತಾನಿರದೆ ಹುಟ್ಟಿಲ್ಲ ಸ್ಥಿತಿಲಯಮೊದಲಿಲ್ಲ
ತಾನಿರದೆ ಆನಂದ ಶೋಕ ಯಾರಿಗುಯಿಲ್ಲ.  ೪

ಐದು ಬಾರಿ ದಿನದಿ ನೆನೆಯುವಂಥವನಲ್ಲ
ಐದು ರೂಪಿ ಜಗದಿ ವ್ಯಾಪಿಸಿಯಿಹನಲ್ಲ
ಐದುಮೊಗನ ತಾತ ರಾಘವವಿಠಲನಲ್ಲ
ಐದಿಸುವ ಗತಿಯ ಬಿಡದಲೆ ಭಜಿಸಲು.        ೫

Comments

Popular posts from this blog

MADIVANTARU UNABAHUDANNA

SHUBHAKRUT

Hiriya Daivavu Jagadi