VARAVEEYE SHRI VARALAKSHMI

 ರಾಗ- ಮೋಹನ                    ತಾಳ- ಆದಿತಾಳ

ವರವೀಯೇ ಶ್ರೀ ವರಲಕ್ಷ್ಮೀ ಪರ
ವರ ಶ್ರೀ ಹರಿ ಉರದೇಶ ಸಂವಾಸಿ

ಚೂರ್ಣ ರಹಿತ ವೀಳ್ಯೆ ಜಗಿದು ಭಕುತಿಯಲಿ
ವರ್ಣ ರಕುತ ರಸನವಿರಲು ಸಂಭ್ರಮದಲಿ
ಕಾಣುತ ಶುಭದಿನ ಯಜಿಸುವೆ ಪ್ರಥಮದಲಿ
ಅಣಿಯಾಗಿ ಹಿರಿಯರ ಆಜ್ಞೆಯಿಂದಲಿ ನಾನು.         ೧

ಶ್ರಾವಣ ಪೌರ್ಣಮಿ ಮುನ್ನ ಭೃಗುವಾಸರ
ಭಾವ ಶುದ್ಧದಲಿ ಕಲಶವ ಸ್ಥಾಪಿಸಿ 
ಮಾವು ತೋರಣ ಹಾಕಿ ಚಿತ್ರ ರಂಗೋಲಿ ಬಿಡಿಸಿ
ಹೂವು ಫಲ ಪತ್ರಂಗಳ ನೇಮದಿ ಸಿದ್ಧವಿರಿಸಿ.          ೨

ನಿತ್ಯ ಕೃತ್ಯವೆಸಗಿ ಯಮುನೆಯನರ್ಚಿಸಿ
ಮತ್ತೆ ಕಲಶವ ಗೃಹ ತುಂಬಿಸಿ
ಉತ್ತುಂಗ ಮಂಟಪದಿ ಸಿಂಗರಿಸಿ ವೈಭವದಿ
ಚಿತ್ತಜನಯ್ಯನ ಮಡದಿಯೆ ಅರ್ಚಿಸುವೆ.                ೩

ಒಂದೇ ಮನದಿ ಧೇನಿಸಿ ಕರೆದು ಮನುಪೂರ್ವದಿ
ಇಂದುವದನೆ ಯಜಿಸುವೆ ಉಪಚಾರದಿಂದಲಿ
ಸುಂದರಿ ಜಗದೊಳು ಆರತಿ ಬೆಳಗುವೆ 
ಕುಂದುಗಳೆಣಿಸದೆ ನಮನ ಸ್ವೀಕರಿಸುತ.                 ೪

ಹರಿವ್ರತ ಹರಿಭಕ್ತಿ ಆಚಾರ ಸಹಿತರ
ಕರೆದು ವಿಪ್ರ ಮಿಥುನ ಬಾಗಿನ ದೋರವ
ಇರಿಸಿ ಸುಭೋಜನ ಕನಕ ತಾಂಬೂಲವ
ಕರದಿ ನಮಿಪೆ ತಾಯೆ ರಾಘವವಿಠಲಪ್ರೀಯೆ.         ೫

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha