VADIRAJA GURUVE NINNA PADA

ವಾದಿರಾಜಗುರುವೇ ನಿನ್ನ ಪಾದ ನಂಬಿ ಬಂದೇ ಎನ್ನ
ಬಾಧಿಸುತ್ತಿಹ ತಾಪತ್ರಯದ ಬಂಧ ಬಿಡಿಸಿ ಸಲಹೋ ಮುನ್ನ

ಶುಭಮತಿಪಾಲಿಸಿ ಮಾರ್ಗದಿಯಿರಿಸೋ 
ಪ್ರಭುವೇ ಪಾದವೆ ಗತಿಯೋ ಎನಗೆ
ಉಭಯ ಭ್ರಷ್ಟನೆನಿಸದೆ ಎನ್ನ 
ಅಭಯವಿತ್ತು ಕಾಯಬೇಕೋ.                 ೧

ಬಗೆ ಬಗೆ ಭ್ರಮೆಯಲಿ ತಿರುಗುವೆ ನಾನು
ಜಗದ ಗುರುವೆ ಕರವ ಪಿಡಿಯೋ
ಖಗವರವಾಹನ ಹರಿ ಗೋವಿಂದ
ನಿಗೆ ಪ್ರಿಯನಾಗುವ ತೆರದಲಿ ಮಾಡೋ.    ೨

ಗುರವರ ನಿನ್ನಯ ಚರಣವ ತೊರೆದು
ಇರದು ಅನ್ಯ ಗತಿಯು ಎನಗೆ
ಪರಿಪರಿ ಬಗೆಯಲಿ ಬೇಡುವೆ ನಿನ್ನನು
ಪರಿಪಾಲಿಸು ಕೃಪೆಯ ತೋರುತ ಸತತ.    ೩

ಕಲಿಯು ಮನದಲಿ ನಲಿಯುತ್ತಿರಲು
ಬಳಲಿ ಬೀಳುವೆ ಭವಬಂಧನದೊಳು
ಬಳಸಿ ಬರುತಿಹ ದುರಿತ ಪಾಶಂಗಳ
ಅಳಿಸಿ ಕಾಯೋ ನಳಿನೋದ್ಭವನೆ.          ೪

ಕಾಮಧೇನು ಕಲ್ಪವೃಕ್ಷ 
ಕಾಮಿತಾರ್ಥ ಭಜಕ ಜನಕೆ
ನೇಮದಿಂದಲಿಯಿತ್ತು ಸಲಹೋ
ಭೌಮ ರಾಘವ ವಿಠಲನ ಪ್ರೀಯ.          ೫

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha