GURUPADA YUGALAVA

ಗುರುಪಾದ ಯುಗಳವ ನಿರುತ ಸ್ಮರಿಸು ಮನವೇ
ಗುರುತರ ದುರಿತವು  ಉರಿವುದು ತ್ವರಿತದಿ.

ಹರಿ ಕುಪಿತ ನಾಗಲು   ಗುರುಗಳು ಪೊರೆವರು
ಗುರು ಕುಪಿತರಾಗಲು  ಹರಿ ಅವರ ನೋಡನು
ಗುರು ತತ್ವ ಅರಿತಿಂತು  ಪರಮ ಭಕುತಿಯಿಂದ
ಚರಣಕೆ ಶರಣಾಗಿ ಪರಮ ಸುಖವ ಪೊಂದಿ   ೧

ಗುರುದೇವತಾತ್ಮನ  ಎನ್ನ ಭಜಿಸಿ ಎಂದು
ತರಳರ ಸಂಘಕೆ ಋಷಭ ಪ್ರೀತಿಲಿ ಪೇಳ್ವ
ಗುರುತರಜ್ಞಾನವ ಕಳೆದು ಜ್ಞಾನವನೀವ
ಗುರುಗಳ ಸಮರಾರು ಅರಸಿ ನೋಡಲು ಜಗದಿ ೨

ಗುರುಮುಖದರುಶನ ಸರುವ  ಪಾಪ ಧ್ವಂಸ
ಗುರುವಾಕ್ಯ ಶ್ರವಣವು ಚಿತ್ತ ತೋಷಕೆ ಕರಣ
ಗುರು ಎನ್ನಯ ಪೆಸರ ಕರೆಯೆ ಸುಗ್ಗಿಯು ಹಬ್ಬ
ಗುರುಮನದಿರಲಾನು ಅದುವೆ ಪರಮ ಕ್ಷೇಮ ೩

ಆಪಾದ ಗುರುಗಳ ರೂಪ ಸ್ಮರಿಸಲು ನಿತ್ಯ  
ಆಪತ್ತು ಬರಲಂಜಿ ಕಾರ್ಯ ಸಾಧನೆ ಸುಲಭ
ಸೋಪಾನ ಮುಕುತಿಗೆ ಗುರುಭಕ್ತಿ ಎಂದಿಗು
ಆಪವನ ಗುರುಗಳ ಚರಣ ವಂದಿಸು ನಿತ್ಯ  ೪

ಗುರುನಿಂದೆ ಕೇಳದಿರು ಗುರು ಚರಿತೆ ಬಿಡದಿರು
ಗುರು ಇಹ ಪರದಲಿ ನಿರುತ ಗತಿಯು ಅನ್ನು
ಗುರು ಅಂತರ್ಯಾಮಿ ಶ್ರೀ ರಾಘವ ವಿಠಲನು
ಗುರುಪ್ರೀತಿಯಿಂದಲಿ ಒಲಿದು ಪಾಲಿಸುವನು.  ೫

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT