Karava Ettida Veera Hanumantha

 ಕರವ ಎತ್ತಿದ ವೀರ ಹನುಮಂತ

ಕರವನೆತ್ತಿದ ನಿತ್ಯ ಶರಣರ ಭಯಮೂಲ
ಪರಿಹರಿಸುತ ನಿತ್ಯ ಸುರತಿಯ ಕೊಡುವೆಯೆಂದು

ಬಿಲ್ಲ ಪಿಡಿದು ರಾಮ ಅನುಜನೊಡನೆ ಬರಲು
ಕೊಲ್ಲಲು ವಾಲಿಯು ಕಳುಹಿಸಿದವನೆನ್ನೆ
ಕ್ಷುಲ್ಲಕ ಮತಿಯಲ್ಲಿ ಹೆದರಿ ಕಂಪಿಸುತಿರೆ
ಬಲ್ಲಿದ ಹನುಮಂತ ರವಿಜನ ಸಲಹಲು.               ೧

ಉದಧಿ ದಾಟಲು ಎಮಗಶಕ್ಯವೆನ್ನುತ ದುಃಖ
ಉದಧಿಲಿ ಕಪಿಸೈನ್ಯ ಬಿದ್ದು ಉಪವಾಸದಿರಲು
ಬುಧರೋಳುತ್ತಮ ವೀರ ತಾನಿರೆ ಭಯವಿಲ್ಲ
ಉದಧಿ ದಾಟುವೆ ರಾಮಕಾರ್ಯ ಸಾಧಿಸಲೆಂದು.  ೨

ಶಿವವರದಿಂದ ಅವಧ್ಯ ರಕ್ಕಸರ ನೋಡಿ
ಜವನ ವಶಕ್ಕವರನಿಡುವ ಸಂಭ್ರಮದಿಂದ
ಭವರೋಗಮೋಚಕ ರಾಮನ ನಿಜದಾಸ
ಅವರ ಕರತಲದಿಂದ ಬಡಿಯಲೋಸುಗವೆಂದು.    ೩

ಸೀತೆಯ ವನದಲ್ಲಿ ಪೀಡಿಸಿ ಮೆರೆದಂಥ
ದೈತ್ಯ ಪತಿ ಸಂಗರದಿ ಎದುರಾಗಿ ನಿಂತಿರಲು
ವಾತಸುತ ನೋಡುತ ರೋಷತಾಮ್ರಾಕ್ಷದಿ
ಭೀತಿವಿಧುರ ಅವನ ಎದೆಯ ಸೀಳಲು ತ್ವರಿತ.      ೪

ರಾಮನಾಮವ ಸತತ ಭಾವ ಭಕುತಿಯಿಂದ
ನೇಮದಿ ಪಾಡುವ ಜನರ ಭಯಸ್ತೋಮವ
ಈ ಮಹಿಯೊಳು ಇಲ್ಲದಂತೆ ಮಾಡುವೆನೆಂದು

ಭೌಮ ರಾಘವ ವಿಠಲ ದಾಸ ಘೋಷಿಸಲೆಂದು.   ೫

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT