SAARI BHAJISIRO VYSARAYAMUNIGALA
ಸಾರಿ ಭಜಿಸಿರೋ ವ್ಯಾಸರಾಯಮುನಿಗಳ
ಸೂರಿಜನಗಳ ದಿವ್ಯಮೌಲಿಭೂಷರ.
ಮದನಮೋಹನ ಕೃಷ್ಣನನ್ನೇ ಕುಣಿಸಿದ
ಪದುಮನಾಭ ಹರಿಯ ಪೂರ್ಣಪ್ರೇಮಪಾತ್ರರ. ೧
ಪ್ರಾಣಪತಿಯ ದಿವ್ಯಸನ್ನಿಧಾನಪಾತ್ರರ
ಪ್ರಾಣಮೂರ್ತಿಗಳನು ಭುವಿಲಿ ಸ್ಥಾಪಿಸಿಪ್ಪರ. ೨
ನ್ಯಾಯಸಮಯಗರಲದಗ್ಧಜ್ಞಾನಿವರ್ಗವ
ನ್ಯಾಯ ಅಮೃತದಿಂದ ಸಲಹಿದಂತ ಧೀರರ. ೩
ಸಿದ್ಧಾಂತವಿಪಿನದಲ್ಲಿ ಧ್ವಾಂತಭೀತಜನಗಳ
ತಿದ್ದಿ ಚಂದ್ರಿಕೇಯ ತೋರಿ ಪೊರೆದ ಕುಶಲರ. ೪
ಕರ್ಕಶೋಕ್ತಿಗಳಲಿ ಹರಿಯ ಮಹಿಮೆ ಜರಿಯಲು
ತರ್ಕತಾಂಡವನ್ನೇ ರಚಿಸಿ ಕುಟ್ಟಿ ನಲಿದರು. ೫
ವ್ಯಾಸರಾಯ ವ್ಯಾಸರಾಯ ಎಂದು ಸ್ಮರಿಸಲು
ಘಾಸಿಗೊಳಿಸುವಂತ ದುರಿತ ಓಡಿಪೋಪುವು. ೬
ಮಧ್ವಸಿದ್ಧಾಂತಸಿಂಧುಪೂರ್ಣಚಂದ್ರರ
ಬುದ್ಧಿ ಪೂರ್ಣರ ಸಕಲರಿಷ್ಟದಾತರ. ೭
ಭೂತಪ್ರೇತ ಪೀಡೆ ದೂರ ಸ್ಮರಣ ಮಾತ್ರದಿ
ವಾತಪಿತ್ತ ರೋಗವಿಲ್ಲ ಭಜಿಸೆ ಭಕ್ತಿಲಿ. ೮
ರತ್ನಮಂಚದಿಪ್ಪ ರೂಪ ಸ್ಮರಿಸಿ ಜಪಿಸಲು
ರತ್ನ ಮುತ್ತು ವರ್ಷಗೈವ ದೀನಶರಣರ. ೯
ಪದುಮನಾಭಮಸ್ಕರೀಂದ್ರಸಾಕ್ಷಿಲಿಪ್ಪರ
ಬುಧರ ಮಾನಸಾಂಬುಜಾತಸೂರ್ಯಸದೃಶರ. ೧೦
ವೈರಾಗ್ಯಜ್ಞಾನಭಕ್ತಿತುಷ್ಟಿನಿತ್ಯಪೂರ್ಣರ
ಸೂರಿಜನಗಳ ದಿವ್ಯಮೌಲಿಭೂಷರ.
ಮದನಮೋಹನ ಕೃಷ್ಣನನ್ನೇ ಕುಣಿಸಿದ
ಪದುಮನಾಭ ಹರಿಯ ಪೂರ್ಣಪ್ರೇಮಪಾತ್ರರ. ೧
ಪ್ರಾಣಪತಿಯ ದಿವ್ಯಸನ್ನಿಧಾನಪಾತ್ರರ
ಪ್ರಾಣಮೂರ್ತಿಗಳನು ಭುವಿಲಿ ಸ್ಥಾಪಿಸಿಪ್ಪರ. ೨
ನ್ಯಾಯಸಮಯಗರಲದಗ್ಧಜ್ಞಾನಿವರ್ಗವ
ನ್ಯಾಯ ಅಮೃತದಿಂದ ಸಲಹಿದಂತ ಧೀರರ. ೩
ಸಿದ್ಧಾಂತವಿಪಿನದಲ್ಲಿ ಧ್ವಾಂತಭೀತಜನಗಳ
ತಿದ್ದಿ ಚಂದ್ರಿಕೇಯ ತೋರಿ ಪೊರೆದ ಕುಶಲರ. ೪
ಕರ್ಕಶೋಕ್ತಿಗಳಲಿ ಹರಿಯ ಮಹಿಮೆ ಜರಿಯಲು
ತರ್ಕತಾಂಡವನ್ನೇ ರಚಿಸಿ ಕುಟ್ಟಿ ನಲಿದರು. ೫
ವ್ಯಾಸರಾಯ ವ್ಯಾಸರಾಯ ಎಂದು ಸ್ಮರಿಸಲು
ಘಾಸಿಗೊಳಿಸುವಂತ ದುರಿತ ಓಡಿಪೋಪುವು. ೬
ಮಧ್ವಸಿದ್ಧಾಂತಸಿಂಧುಪೂರ್ಣಚಂದ್ರರ
ಬುದ್ಧಿ ಪೂರ್ಣರ ಸಕಲರಿಷ್ಟದಾತರ. ೭
ಭೂತಪ್ರೇತ ಪೀಡೆ ದೂರ ಸ್ಮರಣ ಮಾತ್ರದಿ
ವಾತಪಿತ್ತ ರೋಗವಿಲ್ಲ ಭಜಿಸೆ ಭಕ್ತಿಲಿ. ೮
ರತ್ನಮಂಚದಿಪ್ಪ ರೂಪ ಸ್ಮರಿಸಿ ಜಪಿಸಲು
ರತ್ನ ಮುತ್ತು ವರ್ಷಗೈವ ದೀನಶರಣರ. ೯
ಪದುಮನಾಭಮಸ್ಕರೀಂದ್ರಸಾಕ್ಷಿಲಿಪ್ಪರ
ಬುಧರ ಮಾನಸಾಂಬುಜಾತಸೂರ್ಯಸದೃಶರ. ೧೦
ವೈರಾಗ್ಯಜ್ಞಾನಭಕ್ತಿತುಷ್ಟಿನಿತ್ಯಪೂರ್ಣರ
ಆರಾಧ್ಯ ರಾಘವಾಖ್ಯವಿಠಲ ಪ್ರೇಮಪಾತ್ರರ. ೧೧
Comments
Post a Comment