BHAGHYAVA NEEDE TAYE BHAGEERATHI

ಭಾಗ್ಯವ ನೀಡೆ ತಾಯೆ  ಭಾಗೀರಥಿ 
ಭಾಗ್ಯದಾತನ ಸುತೆ ಕರುಣೆಯ ತೋರೆ

ಹರಿಪಾದ ಸಂಭವೆ ಹರಶಿರ ಸಂಗತೆ
ಸುರವರ ಸೇವಿತೆ   ಶರಣು ಶರಣೆಂಬೆ
ಧರೆಯೊಳು ಸುಜನರ ಪರಿಸರ ಮಜ್ಜನವು
ದುರಿತ ಪರ್ವತ ಪವಿ   ಸಿರಿಯರಸ ಒಲಿವಂತೆ.      ೧

ನಿನ್ನ ದರುಶನ ಗೈವ ಜನರ ಪಾಪ ಧ್ವಂಸ
ನಿನ್ನ ಜಲದಿ ಸ್ನಾನ ಹರಿಲೋಕ ಸೋಪಾನ
ನಿನ್ನ ಸೇವಿಸೆ ನಿತ್ಯ ಸಕಲ ಯಜ್ಞ ಫಲವು
ನಿನ್ನ ಸಂಕೀರ್ತನೆ ಪೂತನಿಹ ಪಾತಕಿ.                   ೨

ತಡೆಯಿಲ್ಲದಂತೆ ಸರಿದು ತೃಣಕಾಷ್ಠಗಳ ಸೆಳೆದು
ಕಡಲ ಸೇರುವ ತೆರದಿ ಎನ್ನ ಪಾಪಂಗಳ
ಬಡಿದು ರಾಘವವಿಠಲನಂಘ್ರಿಯೊಳು ಸತತ ಮನವ 
ನಿಡುತ ಸಕಲ ಮಹಿಮೆ ನಿತ್ಯ ಧ್ಯಾನಿಸುವಂತ.       ೩

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha