Namo Namo Bhargava Rama

 ಝಂಪೆ ತಾಳ

ನಮೋ ನಮೋ ಭಾರ್ಗವ ರಾಮ
ನಮೋ ನಮೋ ನೀರದ ಶ್ಯಾಮ

ನಮೋ ಕೋಡಂಡಪರಶು ಧರನೆ
ನಮೋ ಜಮದಗ್ನಿ ಶಿರಸ್ಸಂಧಾತನೆ
ನಮೋ ಪಿತೃ ವಾಕ್ಯ ಲಾಲಿಪನೆ
ನಮೋ ಮಾತೃಭಯ ನಿವಾರಕನೆ.         ೧

ಕಾರ್ತವೀರ್ಯನು ಅಘವನೆಸಗಲು
ಆರ್ತ ಜನನಿಯ ಸಂತೈಸುತಲಿ
ಆತ್ತಚಾಪಪರಶು ಧಾವಿಸಿ ಬಂದೆಯೋ
ಪೂರ್ತ ಸೈನ್ಯದ ಶಿರವ ಕೆಡುಹಿದೆ.          ೨

ಎನ್ನ ಕಾಮವೆ ತುರಗ ಮದವು ದ್ವಿರದವು
ಎನ್ನ ಕ್ರೋಧವೆ ಭಟ ಲೋಭ ಮಹಾರಥ
ಇನ್ನು ಮೀರಿದ ಸೈನ್ಯ ಕೆಡಹಲಾಯುಧವ
ಚೆನ್ನ ರಾಘವ ವಿಠಲ ಮತ್ತೆ ಧರಿಸಿದೆಯೇನೋ.  ೩

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha