RAMANA TUGIRO LALI PADA
ರಾಮನ್ನ ತೂಗೀರೋ ರಘುವಂಶತಿಲಕನ್ನ
ಶ್ಯಾಮಸುಂದರನ್ನ ತೂಗೀರೋ ಪ
ನೇಮದಿ ಭಜಿಪರ ಶರಣನ್ನ ತೂಗೀರೋ
ಕಾಮ ಜನಕನ್ನ ತೂಗಿರೋ. ಅಪ
ಸುಗುಣಭರಿತನ್ನ ದೋಷವಿದೂರನ್ನ
ಅಗಣಿತ ಮಹಿಮನ್ನ ತೂಗೀರೋ
ಬಗೆ ಬಗೆ ಲೀಲೆಯ ತೋರಿದ ಕರುಣನ್ನ
ಜಗದಾದಿಪಾಲನ್ನ ತೂಗೀರೋ. ೧
ಪಾವನ ಪಾದನ್ನ ನಾರಿಯ ಪೊರೆವನ್ನ
ಪಾವಮಾನಿ ಪ್ರೀಯನ್ನ ತೂಗೀರೋ
ಭಾವಗಂಭೀರವಚನನ್ನ ಭೌಮನ್ನ
ರಾವಣಾಂತಕನ್ನ ತೂಗೀರೋ. ೨
ರಾಮನ್ನ ಮರಕತಶ್ಯಾಮನ್ನ ತೂಗೀರೋ
ರಾಮೆಯ ಹೃತ್ಕಂಜಸೂರ್ಯನ್ನ
ರಾಮನ್ನ ಲೋಕವ ರಮಿಪನ್ನ ತೂಗೀರೋ
ಆ ಮಹಾನಂದನ್ನ ತೂಗೀರೋ. ೩
ಪರತತ್ವ ಪರಮಾಪ್ತ ಪರದೈವ ನೋಡಿರೋ
ಪರಬ್ರಹ್ಮರೂಪನ್ನ ಪಾಡಿರೋ
ಪರಗತಿಯಿಪ್ಪನ್ನ ಪರವಾಸುದೇವನ್ನ
ಪರಿಪರಿಯಿಂದಲಿ ಬೇಡಿರೋ. ೪
ಭೋಗಿಯ ಅಗ್ರಜ ಸುಗ್ರೀವ ಮಿತ್ರನ್ನ
ಭಾಗವತರ ಭಾಗ್ಯನ್ನ
ನೀಗಿಸು ಬೇಗನೆ ಭವಬಂಧವೆನ್ನುತ
ಶ್ಯಾಮಸುಂದರನ್ನ ತೂಗೀರೋ ಪ
ನೇಮದಿ ಭಜಿಪರ ಶರಣನ್ನ ತೂಗೀರೋ
ಕಾಮ ಜನಕನ್ನ ತೂಗಿರೋ. ಅಪ
ಸುಗುಣಭರಿತನ್ನ ದೋಷವಿದೂರನ್ನ
ಅಗಣಿತ ಮಹಿಮನ್ನ ತೂಗೀರೋ
ಬಗೆ ಬಗೆ ಲೀಲೆಯ ತೋರಿದ ಕರುಣನ್ನ
ಜಗದಾದಿಪಾಲನ್ನ ತೂಗೀರೋ. ೧
ಪಾವನ ಪಾದನ್ನ ನಾರಿಯ ಪೊರೆವನ್ನ
ಪಾವಮಾನಿ ಪ್ರೀಯನ್ನ ತೂಗೀರೋ
ಭಾವಗಂಭೀರವಚನನ್ನ ಭೌಮನ್ನ
ರಾವಣಾಂತಕನ್ನ ತೂಗೀರೋ. ೨
ರಾಮನ್ನ ಮರಕತಶ್ಯಾಮನ್ನ ತೂಗೀರೋ
ರಾಮೆಯ ಹೃತ್ಕಂಜಸೂರ್ಯನ್ನ
ರಾಮನ್ನ ಲೋಕವ ರಮಿಪನ್ನ ತೂಗೀರೋ
ಆ ಮಹಾನಂದನ್ನ ತೂಗೀರೋ. ೩
ಪರತತ್ವ ಪರಮಾಪ್ತ ಪರದೈವ ನೋಡಿರೋ
ಪರಬ್ರಹ್ಮರೂಪನ್ನ ಪಾಡಿರೋ
ಪರಗತಿಯಿಪ್ಪನ್ನ ಪರವಾಸುದೇವನ್ನ
ಪರಿಪರಿಯಿಂದಲಿ ಬೇಡಿರೋ. ೪
ಭೋಗಿಯ ಅಗ್ರಜ ಸುಗ್ರೀವ ಮಿತ್ರನ್ನ
ಭಾಗವತರ ಭಾಗ್ಯನ್ನ
ನೀಗಿಸು ಬೇಗನೆ ಭವಬಂಧವೆನ್ನುತ
ತೂಗಿರೋ ರಾಘವ ವಿಠಲನ್ನ. ೫
Comments
Post a Comment