KANDE NA VYKUNTA CHELUVANA

 ರೂಪಕ ತಾಳ.

ಕಂಡೆ ನಾ ವೈಕುಂಠ ಚೆಲುವನ.        ಪ
ಸಂಕಟಹರನ ವೆಂಕಟರಮಣನ.       ಅಪ

ವೃಷಭನ ಭಯದಿಂದ ಋಷಿಗಳ ಪೊರೆದನ
ಕೇಸರಿಮಡದಿಗೆ ಸುತನ ಕೊಟ್ಟವನ
ಶೇಷಗೆ ಮದವನು ಅಡಗಿಸಿ ಕಾಯ್ದನ
ದೋಷವನಳಿಸಿ ವಿಪ್ರಗೆ ನೆರವಾದನ ೧
 
ರಮೆಯ ಸಂಗಡ ಪ್ರೇಮದಿ ಕಾದನ
ತಾಮರಸಭವ ಧೇನುವ ಕಾಯ್ದನ
ಜನ್ಮರಹಿತನ ಬಕುಲೆಯ ಸುತನ 
ಪದ್ಮೆಯ ಕೂಡಿದ ಕಿರಾತ ರೂಪನ.  ೨

ಮುದುಕಿಯ ವೇಷದಿ ಧರಣಿಯ ಕಂಡನ
ಖೇದವನಳಸಿ ಹಿತವ ನುಡಿದನ
ಮೋದದಿ ಶುಕನಿತ್ತ ಓದನ ಸವಿದನ
ಮೋದತೀರ್ಥರ ಭಕ್ತರ ಕೈಪಿಡಿವನ. ೩

ಸುರರಸಂಘದಿ ಭಾಮೆ ಕೈಪಿಡಿದನ 
ಆರುಮಾಸದ ನಿಯಮ ಕೈಗೊಂಡನ
ಆರೊಂದು ಗಿರಿಗಳ ಒಡಯ ಶ್ರೀನಾಥನ
ಆರೊಬ್ಬ ಸಮನು ಅಧಿಕನಿಲ್ಲದವನ. ೪

ಅಘವಿದೂರನ ನಾರದಪ್ರೀಯನ
ಗಂಗೆಯ ಪೆತ್ತ ಚೆಲುವ ಪಾದನ
ಸಂಗವ ತ್ಯಜಿಸಿದ ಭಕ್ತರ ಶರಣನ
ರಾಘವವಿಠಲನ ದಯಾಸಾಗರನ.   ೫

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha