SHARANU GAJAVADANA

 ತ್ರಿಪುಟ ತಾಳ ಗಣಪತಿ

ಶರಣು ಗಜವದನ ಶರಣು ವಿಘ್ನೇಶ್ವರ
ಶರಣು ಅಘಹರಣ ಶರಣು ಗಣೇಶ್ವರ

ನಮಿಪೆ ಲಂಬೋದರ ನಮಿಪೆ ಆಕಾಶ ಪತಿ
ನಮಿಪೆ ರಕ್ತಾಂಬರ ನಮಿಪೆ ರಕ್ತ ಮಾಲ್ಯ
ನಮಿಪೆ ಏಕದಂತ ಪಾಶಾಂಕುಶಧರ
ನಮಿಪೆ ಶಿವತನಯ ನಮಃ ಕ್ಷಿಪ್ರ ಪ್ರಸಾದ.      ೧

ಸುಮುಖ ಸ್ಕಂದಾಗ್ರಜ ಮೋದಕ ಹಸ್ತ
ವಿಮಲ ದೂರ್ವಾರ್ಚಿತ ಮಂಗಳಗಾತ್ರ
ಸುಮನಸರೊಳು ಅಗ್ರದಿ ಪೂಜಿತ
ಉಮೆ ಶರೀರಜ ವಿದ್ಯಾಪ್ರದಾಯಕ.             ೨

ವಿಘ್ನಗಳೊಡ್ಡುವೆ ದುರುಳ ಜನಕೆ ನಿತ್ಯ 
ವಿಘ್ನಗಳ ಕಳೆಯುವೆ ಸುಜನಸ್ತೋಮಕೆ ನಿರುತ
ವಿಘ್ನರಾಜನೆ ಶರಣು ಸಿದ್ಧಿ ಮಾರ್ಗದಿ ಇಪ್ಪ
ವಿಘ್ನಗಳಳಿಸಯ್ಯ ರಾಘವ ವಿಠಲ ಪ್ರೀಯ.    ೩

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT