VAJRADHARIYE SHRE KRISHNA

ವಜ್ರ ಧಾರಿಯೇ ಶ್ರೀಕೃಷ್ಣ ನಮಿಪೇನು 
ವಜ್ರ ಲೇಪದ ಪಾಪದಿಂದಲಿ ಸಲಹೋ

ವರ್ಜನ ಮಾಡಿಹೆ ದೋಷಗಳ ವಜ್ರನೆ
ಭರ್ಜನಗೈಯೆಲೋ  ದುರಿತ  ಕಡಲೆಯ ರಾಶಿ
ಗರ್ಜಿಸುತಿಹೆ ವೇದ ನಿನ್ನಯ ಗುಣಗಳ
ತರ್ಜಿಸು ಆಂತರ ದಿತಿಜರ ಕ್ಷಿಪ್ರದಿ.                   

ದುರ್ಜನ ಸಂಗವ ಬಿಡಿಸಿ ಸುಜನರೋಳ್ ಇಡು ನಿತ್ಯ
ನಿಜ ಮಹಿಮೆ ಚಿತ್ತಕೆ      ಅಜನಾ ಪಿತನೆ ತಾರೋ
ಕುಜ ಹರನೇ ಬೇಡುವೆ   ಭಜಿಸುವ ಮತಿಯ ನಿತ್ತು
ವಿಜಯಸಾರಥಿ ಕಾಯೋ ನಿಜ ಜನರ ದಾಸರ. 

ಅನ್ಯ ಕ್ಷೇತ್ರದ ಪಾಪ ಪುಣ್ಯ ಕ್ಷೇತ್ರದಿ ನಾಶ 
ಪುಣ್ಯ ಕ್ಷೇತ್ರದ ಪಾಪ ಕೃಷ್ಣ ಕ್ಷೇತ್ರದಿ ನಾಶ
ಇನ್ನು ವಜ್ರದ ಲೇಪ ಕೃಷ್ಣ ಕ್ಷೇತ್ರದ ಪಾಪ
ಮಾನ್ಯ ಶ್ರೀ ರಾಘವ ವಿಠಲ ಧರಿಸಿ ತೋರ್ದ.   

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT