KADALARATIYA ETTIRE

 ಕದಲಾರತಿಯ ಎತ್ತಿರೆ ಕಡಲಶಾಯಿಗೆ.           ಪ

ಮದನಮೋಹನನಿಗೆ  ರಾಧೆಯ ರಮಣಗೆ
ಬುಧ ಪದ ಸ್ತುತನಿಗೆ   ವಿಧಿಭವ ಸರ್ವೇಶಗೆ    ಅಪ

ಅನಂತ ಪ್ರದೇಶದಲಿ  ಅನಂತ ಕಾಲಕೆ ವ್ಯಾಪ್ತ
ಅನಂತ ಜೀವರ ನೇತ ಅನಂತ ಮಹಿಮನೀತ
ಅನಂತಾನಂತಗುಣ    ಅನಂತ ಭಕ್ತರ ಗತಿ
ಅನಂತ ರೂಪದಿ ಸಮ ಅನಂತ ನಾಮಗೆ ಇಂದು.     ೧

ಅನಂತ ಕಾಯಗೆ ನಮೋ ಅನಂತ ಕಾರ್ಯಗೆ ನಮೋ
ಅನಂತ ಜೀವರ ಸಂಘ    ಅನಂತ ಕರ್ಮಂಗಳ ಕಂಡು
ಅನಂತ ಫಲಗಳನೀವ     ಅನಂತಾಕಾಶದಿಯಿಪ್ಪ
ಅನಂತ ಶಯನಗೆ ಅನಂತ ನಮನ ಪೂರ್ವಕದಿಂದ. ೨

ಅನಂತ ಸಿರಿಕಾಂತ ಶ್ರೀ      ಹನುಮಂತ ಸನ್ನುತ
ಅನಂತ ಮನಃ ಪ್ರೇರಕ      ಶ್ರೀಮಂತ ಬಲವಂತ
ಅನಂತ ಕರುಣೆಯನಿತ್ತು   ಅನಂತ ದುರಿತವ ಕಳೆದು
ಅನಂತ ಸುಖವೀಯುವ ರಾಘವ ವಿಠಲಗೆ.             ೩

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha