NINTA SRIMANTA SIRIVANTA

ನಿಂತ ಶ್ರೀಮಂತ ಸಿರಿವಂತ
ಎಂಥ ಕರುಣಿ ಹನುಮಂತ ಪ್ರಿಯ ನಿಂತ

ದಾರಿದ್ರ್ಯ ಬಹುಯಿರಲು ಸುದತಿಯು ಮೊರೆಯಿಡಲು
ಮಾರಪಿತನ ಬೇಡಿ ಧನವ ತಾ ಎನುತಿರಲು
ಘೋರ ಭವಾಟವಿಯೊಳು ಬಳಲುವ ಜನ
ತಾರಕ ಕೃಷ್ಣನ ನೋಡ ಬಂದ ಸಖಗೆ.         

ಪಕ್ಕದಾಲಯದಿಂದ ಹರಿಗೆ ಅರ್ಪಿಸಲವ
ಲಕ್ಕಿ ಮುಷ್ಠಿಯ ವಸನದೊಳು ಬಿಗಿದು ಒದಗಿರೆ
ಚೊಕ್ಕ ದ್ವಾರಕೆ ಪೊಂದಿ ಬೆರಗಾಗಿ ನೋಡಲು
ಚಕ್ಕನೆ ನಿಂತನು ಸಖನ ಪೂಜೆಯಗೈದ.      

ಗುರುಕುಲವಾರ್ತೆಯ ಸ್ಮರಿಸಿ ಹಿಗ್ಗುತಲಿರೆ
ಗುರು ಜಗನ್ನಾಥನು ಪೃಥುಕ ತಂಡುಲವನ್ನೆ
ಉರು ಪ್ರೀತಿಯಿಂದಲಿ ಕರದಿ ಕಸಿದು ಮೆದ್ದ
ಸಿರಿ ಕರ ಪಿಡಿಯಲಭೀಷ್ಟವರವಿತ್ತ ಕರುಣಿ.  

ಎಂದು ಬೇಡನು ಧನವ ರಕ್ತಿರಹಿತರ ಮಣಿ
ನೊಂದ ಭಾಮೆಯವಾಕ್ಯ ನಡೆಸಲೋಸುಗ ಇಹನು
ಎಂದು ನೀಗದ ಧನವಿತ್ತು ಪೊರೆವೆನು ಎನುತ
ನಿಂದು ಧಾವಿಸಿ ಬಂದು ವರಮತಿ ವರವಿತ್ತ. 

ಭಕ್ತವತ್ಸಲ ಭಕ್ತರಪರಾಧ ಸಹಿಪನು
ಭಕ್ತರಿಪ್ಪುವ ಪತ್ರಫಲ ಒಪ್ಪುವ ಕರುಣಿ
ಭಕ್ತರಿಗಿಪ್ಪನು ವಿಫುಲ ಸಂಪದಗಳನು
ಭಕ್ತ ಕುಚೇಲಗೆ ರಾಘವ ವಿಠಲನು.   

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT