Vijayaraya Vijayaraya
ವಿಜಯರಾಯ ವಿಜಯರಾಯ ! ವಿಜಯರಾಯ ಎನ್ನಿರೋ! ವಿಜಯಸಾರಥಿ ಒಲಿದು ವೇಗದಿ ! ಭವದ ವಿಜಯ ಕೊಡುವನೋ ! ವಿ ಎನ್ನೆ ವಿವೇಕದಿಂದಲಿ ! ವೀಂದ್ರರೊಢನ ತೋರ್ವನೊ ಜ ಎಂದು ಜಪಿಸೆ ನಿತ್ಯದಿ ! ಕರಣ ಜಯವ ಕೊಡುವನೋ ಯ ಎನ್ನೆ ಯತುನದಿಂದ ! ಯಮನು ಅಂಜಿ ನೋಡನೋ ರಾ ಎನಲು ರಾಗದಿಂದಲಿ ! ರಮೆಯ ಅರಸ ರಕ್ಷಿಪನೋ !!೧!! ಯ ವೆನಲು ಸಂಯಮದಿ ! ಯಜ್ಞ ಸುತನು ಒಲಿವನು ! ಆವನು ಸಾರಿದ ತತ್ವಗಳನು ! ಒಲಿದು ಮತಿಗೆ ತರುವನು ಇವರ ನಾಮವ ಪೇಳ್ವ ಜನಗಳ ! ಜನುಮ ಭುವಿಲಿ ಸಾರ್ಥವು ! ಅವನಿಯೊಳಗೆ ಇವರ ತೊರೆದರೆ ! ಗತಿಯು ಅವಗೆ ನರಕವು !!೨!! ಇವರನಂಬಿದ ಜನಕೆ ಹರಿಯು ! ಗತಿಯನಿಪ್ಪನು ನಿಶ್ಚಯ ಇವರ ಪಾಡಲು ಜನರು ತೊಳೆವರು ! ತಮ್ಮ ಪಾಪದ ಸಂಚಯ ! ಇವರ ಬೇಡಲು ಹರಿಯ ಜ್ಞಾನವು ! ಒದಗಿ ಬಪ್ಪುದಸಂಶಯ ! ಇವರ ಧ್ಯಾನವ ಮಾಡುತಿರಲು ! ಕಾಯ್ವ ರಾಘವವಿಠ್ಠಲ !!೩!!