Maralu Maadikondeyalle Mayadeviye

ಮರುಳು ಮಾಡಿಕೊಂಡೆಯಲ್ಲೆ ಮಾಯಾ ದೇವಿಯೇ
ಉರಗಶಯನ ಗೋವಿಂದ ನಿರುತ ನಿನ್ನ ಮರೆಯದಂತೆ

ಪ್ರಲಯದಲ್ಲಿ ಸಕಲಜಗವು ನಿದ್ರಿಸಿರಲು ಜಾಣ್ಮೆಯಿಂದ
ಚೆಲುವೆ ನೀನು ಶ್ರುತಿಗಳಿಂದ ಸ್ತುತಿಸಿ ಪತಿಯ ಎಬ್ಬಿಸುತಲಿ.  ೧

ಎಷ್ಟು ರೂಪ ಹರಿಯು ತಾಳ್ವ ಅಷ್ಟು ರೂಪದಿಂದ ಇರುತ
ಇಷ್ಟ ಪತಿಯ ಸೇವೆಮಾಡಿ ಗರ್ಭದಿಂದ ಬಪ್ಪುವಂತೆ. ೨

ಹರಿಯ ಸದನದಲ್ಲಿ ಸಾಸಿರಾರು ಸಖಿಯರಿರಲು ತಾನೆ
ಪರಮ ಸಂಭ್ರಮದಿ ಸಕಲ ಗೃಹದ ಕೃತ್ಯಗಳನು ಮಾಡಿ.  ೩

ಹರಿಯು ಧರೆಲಿ ಇರಲು ಆವ ಲೀಲೆಗಳನು ತಾನು ಮಾಳ್ಪ 
ಅರಿತು ಮತಿಯ ಕುಶಲೆ ತಾನು ಅಂತು ಲೀಲೆಗಳನು ಮಾಡಿ.  ೪

ಕೃಷ್ಣ ತನ್ನ ಅಣ್ಣನನ್ನು ರೂಪಗೆಡಹಿ ಮಾನವಳಿಸೆ
ಕಷ್ಟಮಾತು ನುಡಿಯೆ ಒಂದಿಷ್ಟು ಕಲಹವಾಗದಂತೆ.  ೫

ಅನ್ಯ ಸತಿಯ ಕರವ ಪಿಡಿವ ಕಾಲದಲ್ಲು ಸುರರು ಇರಲು
ನಿನ್ನ ಕರೆಸಿ ಬಿಡದೆ ಹರಿಯು ಎದುರಿನಲ್ಲಿ ವರಿಸುವಂತೆ.   ೬

ಇನ್ನು ಬೇಡಿಕೊಂಬೆ ಸಿರಿಯೆ ಚೆನ್ನ ರಾಘವವಿಠಲಪಾದ
ಎನ್ನ ಮನದಿ ನಲಿಯುವಂತೆ ಮುನ್ನ ಭಾಗ್ಯ ಕೊಟ್ಟು ಕಾಯೆ.   ೭

Comments

Popular posts from this blog

RAMANA TUGIRO LALI PADA

Karava Ettida Veera Hanumantha