BALAKRISHNA MANEGE BANDA

ಬಾಲಕೃಷ್ಣ ಮನೆಗೆ ಬಂದ  ಬಾಗಿಲು ತೆರೆಯಿರೋ ಬಾಲಚಂದ್ರನಿಭನು 
ಪೂರ್ಣ ಗುಣನು ಕರುಣೆಯಿಂದ ಬಂದ

ಬೊಮ್ಮ ರುದ್ರ ವರ್ತಕನು ಕೇಶಿಮಾರ  ಶಸ್ತ ಕೇಶಿ 
ಎಮ್ಮ ಪೊರೆಯಲೆಂದು ಕೇಶ ರೂಪಿ ಕೇಶವ ಬಂದನು. ೧

ಸರುವವ್ಯಾಪ್ತ ಪುರುಷರೂಪ ತ್ರಯನು ಲಕುಮಿ ಮುಕ್ತ ರಯನ
ನರರ ಅಯನ ಸುಗುಣ ಸ್ವಚ್ಛ ಜ್ಞೇಯ ಗಮ್ಯ  ಒಡೆಯನೋ. ೨

ರಮೆಯ ಅರಸ ಸಕಲ ವೇದ ಶಾಸ್ತ್ರ ಪಾದ್ಯ ಒಡೆಯ ಹೀನ
ಎಮಗೆ ಮುಕ್ತಿ ನೀಡಲೆಂದು ಗೋಪಿ ರಮಣ ಮಾಧವ ೩

ಗೋವ ಕಾಯ್ವ ಸಕಲವೇದ ರಕ್ಷೆ ಮಾಳ್ಪ ಸ್ವರ್ಗದೊಡೆಯ
ಮಾವನನ್ನು ಕೊಂದ ಗೋವಿಂದ ನಲಿಯ  ಬಂದನು  ೪

ವಿಶ್ವ ವ್ಯಾಪ್ತ ವಿಶ್ವರೂಪ ಚಿತ್ರ ಪ್ರಾಣ ಮೋದ ಶೀಲ
ವಿಶ್ವ ದುರಿತ ಕಳೆಯಲೆಂದು ವಿಷ್ಣು ರೂಪಿ ಬಂದನು.  ೫

ಚೆಂದ ಪಾಕ ಮಾಳ್ಪ ಭೀಮ ನೇತೃ ದುಷ್ಟ ಸುಖವ ಕಳೆವ
ಬಂದ ಮಧುಕೈಟಭಾರಿ ಮಧುಸೂದನಾಹ್ವನು.   ೬

ತ್ರಿಗುಣ ವೇದಗಳನು ಆಳ್ವ ಮೂರು ಹೆಜ್ಜೆ ಭುವಿಯಲ್ಲಿಟ್ಟ
ತ್ರಿಗುಣ ಹೀನ ತ್ರಿವಿಕ್ರಮಾರ್ಯ ಹೆಜ್ಜೆಯಿಡುತ ಬಂದನೋ .  ೭

ದುಷ್ಟ ದರ್ಪ ಕಳೆವನೀತ ಅಂದ ಸೌಂದರ್ಯ ನೇಮಿ
ಶಿಷ್ಟ ಜನಕೆ ಮೋದವೀವ ಪುಟ್ಟ ವಾಮನ ಬಂದನೋ. ೮

ಸಕಲ ವೇದಧರನು ರಮೆಯ ಧರನು ವ್ರಜದ ಕಾಂತಿ ಧರನು
ಸಕಲ ಕಾಂತಿ ಮೂಲ ಶ್ರೀಧರನು ಬಂದ ಬನ್ನಿರೋ.  ೯

ಇಂದ್ರಿಯಂಗಳೀಶ ತರಣಿ ಬಿಂಬದೊಳಗೆ ಇವನ ಕೇಶ
ಇಂದ್ರಿಯಂಗಳನ್ನು  ಸೆಳೆವ ಹೃಷಿಕೇಶ ಬಂದನು .  ೧೦

ಪದ್ಮ ನಾಭಿಯಲ್ಲಿ ಧರಿಪ ಪದ್ಮಪ್ರಿಯನ  ಸದೃಶಕಾಂತಿ
ಪದ್ಮನಾಭ ಎಮ್ಮ ಧರಿಪ ಪದ್ಮ ಮುಖವ ಬೆಳಗಲು. ೧೧

ದುಷ್ಟದಮನ ದೋಷದೂರ ಪ್ರಳಯ ಜಲದಿ ರಮಿಪ ವ್ರಜದಿ 
ಎಷ್ಟು ದಾಮ ಉದರದಲ್ಲಿ ಧರಿಪ ದಾಮೋದರನು. ೧೨

ಕೊಂಕು ದಿತಿಜ ಪ್ರಾಣ ಸೆಳೆವ ಲೀಲೆ ತೋರಿ ಸುಜನ ಮನವ  
ಶಂಕರೇಡ್ಯ ರಾಮ ರೂಪಿ ಬಂದ ಸಂಕರುಷಣ.  ೧೩

ವಾಸಮಾಳ್ಪ ಸಕಲ ಜಗದಿ ಜ್ಞಾನಿ ಸೃಜಿಪ ಕ್ರೀಡೆಗೈವ
ವಾಸುದೇವ ಬಂದ ವಸುದೇವಸುತನ ನೋಡಿರೋ. ೧೪

ಪ್ರದ್ಯುಮ್ನ ಪಿತನು ಶ್ರೇಷ್ಠ ಕಾಂತಿ ಪೂರ್ಣ ಬಲನು ಪೂರ್ಣವಿತ್ತ 
ಪ್ರದ್ಯುಮ್ನ ಬಂದ ಮದನ ಮನವ ಮೋಹಗೈವ ಚದುರನು. ೧೫

ಅನಿರುದ್ಧ ತಾತ ರೋಧರಹಿತ ರೋಧರಹಿತ ಮುಕ್ತಿಯಿಪ್ಪ
ಅನಿರುದ್ಧ ಬಂದ  ತಡೆಯಬೇಡಿ ತತ್ವಪತಿಗಳೀಶನು .   ೧೬

ಪುರುಷರಿಂದ ಉತ್ತಮನು ಪುರದಿಯಿಪ್ಪ ತಮಕೆ ದೂರ
ಪುರುಕರ್ಮಫಲಗಳೀವ ಪುರುಷೋತ್ತಮನು ಬಂದನು. ೧೭

ಅಧಃ ಪತನ ಇವಗೆಯಿಲ್ಲ ಅಕ್ಷಜನ್ಯ ಜ್ಞಾನದೂರ
ಅಧೋಕ್ಷಜನು ಬಂದ ಕಣ್ಣ ತುಂಬ ನೋಡಿ ಬನ್ನಿರೇ.  ೧೮

ನರನು ಅಲ್ಲ ಮೃಗವು ಅಲ್ಲ ಎಮ್ಮ ದೋಷ ಸಹಿಸಿ ಬಂದ
ಪರರ ಹಿಂಸೆ ಮಾಳ್ಪ ನಾರಸಿಂಹ ಬಂದ ನೋಡಿರೆ.  ೧೯

ಚ್ಯುತಿಯುಯಿಲ್ಲ ಗುಣಕೆ ಎಂದು ಚ್ಯುತಿಯುಯಿಲ್ಲ ಪದಕೆ ಎಂದು 
ಚ್ಯುತಿಯುಯಿಲ್ಲದಂಥ ಪದವನೀಯಲಚ್ಯುತ ಬಂದನೋ.  ೨೦

ಜನನ ಹೀನ ಭಕುತ ಜನರ ಸೃತಿಯ ಮರ್ದಿಸುವನು ವ್ರಜದ
ಜನರ ದುರಿತ ಕಳೆವ ಜನಾರ್ದನನು ಬಂದ ನೋಡಿರೋ . ೨೧

ಇಂದ್ರನನುಜ ಇಂದ್ರಗಧಿಕ ರುದ್ರಪಾಲವಾಯುಪತಿಯು
ಇಂದ್ರ ತನುಜ ರಕ್ಷೆಗೈವ ಉಪೇಂದ್ರ ಬಂದ ನೋಡಿರೋ . ೨೨

ಹರಿಯು ಪಾಪಹರನು ಬಂದ ವ್ರಜದ ದುರಿತಹರನು ಬಂದ
ಹರಗೆ ಉತ್ತಮನು ಬಂದ ಭವದ ಹರನ ನೋಡಿರೋ.  ೨೩

ಪೂರ್ಣ ಸುಖನು ದುಷ್ಟ ದಹನ ಭುವಿಲಿ ಮೋದಿ ಕಳೆಯ ಕಳೆವ
ಪ್ರಾಣವಂತ ದಿತಿಜ ಪ್ರಾಣ ತೆಗೆವ ಕೃಷ್ಣ ಬಂದನೋ.  ೨೪

ಕಂತುಪಿತನ ನಾಮಗಳನು   ಇಂತು ಭಕುತಿಯಿಂದ ಪಠಿಸೆ
ಎಂಥ ಪಾಪವಿರಲು ಪೋಪುವಂತೆ ಮಾಡಲೆಂದು ಕರುಣಿ.  ೨೫

ಹರಿಯ ನಾಮ ಗತಿಯು ಎನಲು ಅರಿವ ದೋಷ ರಾಶಿಯನ್ನು
ಅರಿವು ಭಕುತಿಗಳನುಯಿತ್ತು ಪೊರೆಯಲೆಂ ಸಖರ ಕೊಡಿ.  ೨೬

ರಾಗ ವಿಷಯಗಳಲಿ ತೊರೆದು ರಾಗ ಹರಿಯ ಪದದಿಯಿಡಲು
ರಾಗದಿಂದ ಪಾಡುವವರ ರಾಘವ ವಿಠಲ ಪೊರೆಯಲೆಂದು.  ೨೭

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha