BHANDAVA SHODHISI

 ರೂಪಕ ತಾಳ.

ಭಾಂಡವ ಶೋಧಿಸಿ ನಿತ್ಯ ಮನವೆಂಬ ಸುಂದರ

ಭಂಡತನದಲಿ ಸತತ ಪಿಂಡಾಂಡ ಸುಖವ ಅರಸಿ
ಅಂಡಜವಾಹನ ಉದ್ದಂಡ ಮಹಿಮನ ಮರೆವರೆ

ಆಸೆ ಕ್ರೋಧವು ಲೋಭ ಮತ್ಸರ ಮದ ಮೋಹ
ಮಾಸದಂತಹ ಮಸಿ ವಜ್ರಲೇಪವಾಗಿರೆ
ವಾಸುದೇವನೆ ಹಿರಿದು ತಾರತಮ್ಯೆಂಬೋ ಹಿಟ್ಟು
ಕಾಸುಯಿಲ್ಲದೆ ತಂದು ಪರಮ ಯತ್ನದಿ ತಿಕ್ಕಿ.       ೧

ರೂಪ ಯೌವನ ವಿದ್ಯೆ ದ್ರವಿಣ ಸತ್ಕುಲ ಬಲ
ಈ ಪರಿ ಮದವೆಂಬೋ ಜಿಗುಟು ಅಂಟಿರಲಾಗಿ
ಶ್ರೀ ಪತಿ ದಯದಿಂದ ಒದಗಿಹುದೆನ್ನುವ
ಆ ಪರಮ ಸತ್ಯ  ಸೀಗೆಯ ಬಳಸುತ್ತಾ.               ೨

ಸುಳ್ಳು ಶಾಠ್ಯವು ವೈರ  ಪರವನಿತೆ ಪರಧನ
ಕಳ್ಳತನವು ನಾನು ನನ್ನದೆಂಬುವ ಮುಸುರೆ
ಬಲ್ಲಿದ ಜನರ ಸಂಗವೆಂಬೋ ನಾರನು ಪಿಡಿದು
ಬೆಳ್ಳಗಾಗುವ ತನಕ ಫುಲ್ಲನಾಭನ ನೆನೆದು.          ೩

ಹರಿಯ ಭಕುತರ ನಿಂದೆ ನಿಗಮ ಸ್ಮೃತಿಗಳ ನಿಂದೆ
ಹರಿಯ ಗುಣರೂಪಕ್ರಿಯೆಗಳಲ್ಲಿ ಭೇದ
ಹರಿಯ ಅವತಾರ ವ್ಯತ್ಯಯ ಎಂಜಲು
ಬೆರೆಯದಂತಲೆ ಮುನ್ನ ಎಚ್ಚರದಿಂದಲಿ.             ೪

ವೈರಾಗ್ಯ ಕ್ಷಾರಕ್ಕೆ ವ್ರತವೆಂಬೋ ಹುಳಿ ಬೆರೆಸಿ
ಕಾರುಣ್ಯ ಜಲದಿ ಶೋಧಿಸಿ ಗುರು ಮಧ್ವ
ಸಾರಿದ ಶಾಸ್ತ್ರ ವೆಂಬೋ ಗಾಳಿಗೆ ಹಿಡಿದು
ಶ್ರೀ ರಾಘವ ವಿಠಲನ ಪೂಜೆಗೆ ಅಣಿಮಾಡಿ.        ೫

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT