TAPPADE NAMISELO HARICHARANA

ತಪ್ಪದೇ ನಮಿಸೆಲೊ  ಹರಿ ಚರಣ ಕಮಲವ 
ತಪ್ಪು ಸಾಸಿರ ಒಪ್ಪಿ ಕಡುಕರುಣಿ ಕಾಯ್ವನು

ಹತ್ತು ಅಶ್ವಮೇಧಗಳ ಮಾಡಿದ ಮ್ಯಾಲೂ 
ಮತ್ತೆ ಧರೆಗೆ ಬಂದು ಪುಟ್ಟಲಿ ಬೇಕು
ಚಿತ್ತಜನಯ್ಯನ ಭಕುತಿಲಿ ನಮಿಸಲು
ಇತ್ತು ಮೋಕ್ಷದ ಸುಖ ಎಂದಿಗೂ ಸಲಹುವ                ೧

ಶಿರಬಾಗಿ ಮನದಲ್ಲಿ ಹರಿಯ ನೆನೆಯುತ್ತ ಸತತ
ಕರಮುಗಿದು ದೃಷ್ಟಿಯ ಹರಿರೂಪದಿ ನೆಲೆಸುತ್ತ
ಉರಸನ್ನೆ ಧರೆಗಿಟ್ಟು ವಚಸಾ ಸ್ತೋತ್ರವ ಮಾಡಿ
ಚರಣ ಮಂಡಿಯ ಚಾಚಿ ಭಾವುಕತನದಲ್ಲಿ                ೨

ಅವಜ್ಞೆಯಿಂದಲೂ ಸರಿ ನಮಿಸಲು ಹರಿಯನ್ನು
ಅವನಿಧರ ತಾ ಶಿಶುಪಾಲಹರನು ಕಾಯ್ವ
ಭುವನ ಸುಂದರನ ಪದವ ನಮಿಸದಿರಲು ಮತ್ತೆ
ಅವನ ಸೆಳೆದು ತನ್ನಿ ಎಂದನು ಭಟರಿಗೆ ಯಮನು.     ೩

ನಮೋ ನಮೋ ಅನಿರುದ್ಧ ನಮೋ ನಮೋ ಪ್ರದ್ಯುಮ್ನ
ನಮೋ ಸಂಕರುಷಣ ನಮೋ ವಾಸುದೇವನೆ
ನಮೋ ಹತ್ತವತಾರನೇ ನಮೋ ಅನಂತ ರೂಪನೆ
ನಮೋ ಅಗಣ್ಯ ಮಹಿಮನೆ ನಮೋ ನಮೋ ಎನ್ನುತ ೪

ಗುರು ಅಂತರ್ಯಾಮಿ ಶ್ರೀ ರಾಘವ ವಿಠಲನು 
ಗುರುವಾಕ್ಯವಾಲಿಸಿ ನಮಿಪ ಸಜ್ಜನರನ್ನು
ಗುರುತರ ಬಾಧೆಯ ಬಿಡಿಸಿ ಮುಕುತಿಯಿತ್ತು
ಗುರು ಮೋದ ಉಣಿಸುತ್ತ ಬಿಡದೆ ಪಾಲಿಪ ನಿತ್ಯ.     ೫

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha