TEPPADOLIPPA APPANE KAYO
ತೆಪ್ಪ ದೊಳಿಪ್ಪ ಅಪ್ಪನೇ ಕಾಯೋ
ತಪ್ಪುಗಳೊಪ್ಪಿ ಕಂದರ್ಪನಯ್ಯ.
ಕಾಲಕಾಲಕ್ಕೆ ಏಳದ ತಪ್ಪು
ಕಾಲಕಾಲಕ್ಕೆ ಸಂಧ್ಯೆ ಮಾಡದ ತಪ್ಪು
ಕಾಲಕಾಲಕ್ಕೆ ಗುರುಹಿರಿಯರ ನೋಡದಾ ತಪ್ಪು
ಕಾಲಕಾಲಕ್ಕೆ ಕಾಲನ ನೆನೆಯದ ತಪ್ಪು. ೧
ಜಪ ಮಾಡದ ತಪ್ಪು ತಪ ಮಾಡದ ತಪ್ಪು
ವಿಪಗಮನನ ಸುಲಭ ಪೂಜೆ ಮಾಡದ ತಪ್ಪು
ಅಪವರ್ಗದೊಡೆಯಗೆ ನಮಿಸಿ ಭಾಗದ ತಪ್ಪು
ಉಪಮೆ ರಹಿತನ ಕಥೆಯ ಎಂದು ಕೇಳದ ತಪ್ಪು. ೨
ಕುಪಿತನಾಗಿ ಶಿಷ್ಟರ ಜರಿಯುವ ತಪ್ಪು
ಕುಪಥಗಾಮಿಗಳ ಅನುಸರಿಸುವ ತಪ್ಪು
ಸುಪಥ ತೋರ್ವರ ಅಣಕಿಸೊ ತಪ್ಪು
ಕಪಟತನದೊಳು ನಿತ್ಯ ಮೆರೆಯುವ ತಪ್ಪು. ೩
ಕಾರ್ಯಾಕಾರ್ಯವ ತಿಳಿಯದ ತಪ್ಪು
ಕಾರ್ಯಕೃತ್ಯವ ಮರೆಯುವ ತಪ್ಪು ಅ
ಕಾರ್ಯ ಕೈಗೊಳ್ಳುವಾಗ ಲಜ್ಜೆ ಇರದ ತಪ್ಪು
ಕಾರ್ಯಗಳ ನಾನೇ ಮಾಳ್ಪೆ ನೆನುವ ತಪ್ಪು. ೪
ಕರಿವರವರದನೆ ಪ್ರಹ್ಲಾದವರದನೆ
ಧರುಮ ವ್ಯಾಧಗೆ ಒಲಿದ ಹದ್ದಿಗೆ ಒಲಿದನೆ
ಪರಿಪರಿಯಲ್ಲಿ ಕರವ ಮುಗಿದು ಬೇಡುವೆ ಎನ್ನ
ತಪ್ಪುಗಳೊಪ್ಪಿ ಕಂದರ್ಪನಯ್ಯ.
ಕಾಲಕಾಲಕ್ಕೆ ಏಳದ ತಪ್ಪು
ಕಾಲಕಾಲಕ್ಕೆ ಸಂಧ್ಯೆ ಮಾಡದ ತಪ್ಪು
ಕಾಲಕಾಲಕ್ಕೆ ಗುರುಹಿರಿಯರ ನೋಡದಾ ತಪ್ಪು
ಕಾಲಕಾಲಕ್ಕೆ ಕಾಲನ ನೆನೆಯದ ತಪ್ಪು. ೧
ಜಪ ಮಾಡದ ತಪ್ಪು ತಪ ಮಾಡದ ತಪ್ಪು
ವಿಪಗಮನನ ಸುಲಭ ಪೂಜೆ ಮಾಡದ ತಪ್ಪು
ಅಪವರ್ಗದೊಡೆಯಗೆ ನಮಿಸಿ ಭಾಗದ ತಪ್ಪು
ಉಪಮೆ ರಹಿತನ ಕಥೆಯ ಎಂದು ಕೇಳದ ತಪ್ಪು. ೨
ಕುಪಿತನಾಗಿ ಶಿಷ್ಟರ ಜರಿಯುವ ತಪ್ಪು
ಕುಪಥಗಾಮಿಗಳ ಅನುಸರಿಸುವ ತಪ್ಪು
ಸುಪಥ ತೋರ್ವರ ಅಣಕಿಸೊ ತಪ್ಪು
ಕಪಟತನದೊಳು ನಿತ್ಯ ಮೆರೆಯುವ ತಪ್ಪು. ೩
ಕಾರ್ಯಾಕಾರ್ಯವ ತಿಳಿಯದ ತಪ್ಪು
ಕಾರ್ಯಕೃತ್ಯವ ಮರೆಯುವ ತಪ್ಪು ಅ
ಕಾರ್ಯ ಕೈಗೊಳ್ಳುವಾಗ ಲಜ್ಜೆ ಇರದ ತಪ್ಪು
ಕಾರ್ಯಗಳ ನಾನೇ ಮಾಳ್ಪೆ ನೆನುವ ತಪ್ಪು. ೪
ಕರಿವರವರದನೆ ಪ್ರಹ್ಲಾದವರದನೆ
ಧರುಮ ವ್ಯಾಧಗೆ ಒಲಿದ ಹದ್ದಿಗೆ ಒಲಿದನೆ
ಪರಿಪರಿಯಲ್ಲಿ ಕರವ ಮುಗಿದು ಬೇಡುವೆ ಎನ್ನ
ಪರಮಪುರುಷ ಸಲಹೋ ರಾಘವ ವಿಠಲಯ್ಯ. ೫
Comments
Post a Comment