DASARAYA PALAYA GOPALARAYA

ದಾಸರಾಯ ಪಾಲಯ  ಗೋಪಾಲರಾಯ

ದಾಸ ದಾಸರ ದಾಸ   ದಾಸ ಎಂದೆನಿಸಿ ನಿತ್ಯ
ಹೇಸಿ ವಿಷಯಗಳಲಿ ಘಾಸಿ ಮಾಡದೆ ಎನ್ನ

ಒಂದು ಅರಿಯೆನು ನಾನು   ಅಂಧ ಕೂಪದಿ ಇಹೆನು
ಮುಂದೆ ದೊಡ್ಡ  ಗಿರಿಯು   ದಂದ ಶೂಕವು ಪ್ರಚುರ
ಹಿಂದೆ ದಾರಿಯು ಮಸುಕು ಮುಂದೆ ಕಂಟಕ ಮಾರ್ಗ
ಬಂಧು ಬುಧ ಜನಪ್ರಿಯ   ನಿಂದು ನಡೆಸಲಿಬೇಕು.       ೧

ಭವನದೊಳಿಹನೊಬ್ಬ  ಅವನಿಪಾಲನು ಸಮ
ಅವಗಿಲ್ಲೆನ್ನುತ             ಅವನಿಧರನ ಮರೆತು
ದವದಿ ಷಟ್ಕರಿ ಸಹ      ದ್ರವಗೈವ ತುರಗದಿ
ಅವ ಖಟ ಸೇರುವ      ಅವನ ದಯೆಯಲಿ ಮಾಡು.   ೨

ಇಹ ಪರಗತಿ ನೀನೆ        ಕುಹಕ ಬಿಡಿಸಿ ಸುಜನ
ಸಹವಾಸದಿರಿಸುತ್ತಾ      ಗಹನಾಬ್ಧಿ ದಾಟಿಸೋ
ಸಹಿಸೆನ್ನ ಅವಗುಣ       ಅಹಿಶಯನನೊಲುಮೆಯ
ಅಹರಹಃ ದೊರಕಿಸೋ ಅಹೋ ರಾಘವವಿಠಲದಾಸ.೩

Comments

Popular posts from this blog

MADIVANTARU UNABAHUDANNA

SHUBHAKRUT

Hiriya Daivavu Jagadi