PLAVA

ಪ್ಲವ

ಯುಗದ ಪ್ರೇರಕ ಆದಿ ಪುರುಷನು
ಯುಗಾದಿಕೃತನು ರಮೆಯ ಅರಸನು
ಯುಗದವರ್ತಕನೆಂದು ಕರೆಸುವ ವಿಶ್ವ ನಾಮಕನು.
ಯುಗಳದೂರನೆ ದೈತ್ಯರನು ಸಂ
ಯುಗದಿ ಓಡಿಸಿ ನಿಜರ ಪಿಡಿ ಮೂರ್
ಯುಗನೆ ನಿನ್ನಯ ಸ್ಮರಣೆ ನೀಡುತ ಎಮ್ಮ ರಕ್ಷಿಪುದು.

ನಿಗಮ ಗೋಚರ ಅಚರ ಮಹಿಮನೆ
ಸಾಗರಾಂತದಿ ಶಯನ ಮಾಳ್ಪನೆ
ಅಗವ ಧರಿಸಿದ ಬಾಲ ಕೃಷ್ಣನೆ ನಮಿಪೆ ಅನುದಿನವೂ.
ಭೋಗ ವಿಷಯದಿ ಮನವ ತಪ್ಪಿಸಿ
ಯೋಗಿ ಜನಗಳ ಸಂಗ ಮಾಡಿಸಿ
ಉಗಮ ರಹಿತನೆ ಸಲಹೊ ದೇವನೆ ಭಕ್ತವತ್ಸಲನೆ.

ಪ್ಲವಗ ಮೂರುತಿ  ಹನುಮದೀಶನೆ 
ಪ್ಲವನ ಗೈಯುವ ಮನವ ನಿಲ್ಲಿಸಿ
ಪ್ಲವಿಕ ಪ್ರವರನ ಪರಮ ಶಾಸ್ತ್ರ ದಿ ರುಚಿಯ ಮಾಡಿಪುದು. 
ಭವದ ಅಬ್ಧಿಲಿ ಇಪ್ಪ ಸುಜನರ 
ಪ್ಲವದ ತೆರದಲಿ ತ್ವರಿತ ದಾಟಿಸು
ಪ್ಲವಸುನಾಮನೆ ಜಗದವೊಡೆಯನೆ ರಾಘವವಿಠಲನೆ

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT