GURU MADHWA RAYARIGE NAMO NAMO

ಗುರು ಮಧ್ವರಾಯರಿಗೆ ನಮೋ ನಮೋ
ದುರುಳರ ಭಂಜಕಗೆ ನಮೋ ನಮೋ.

ಮಧ್ಯಗೇಹಸುತನಿಗೆ ನಮೋ ನಮೋ
ಹೃದ್ಯ ಬಾಲರೂಪನಿಗೆ ನಮೋ ನಮೋ ೧

ವಾಸುದೇವ ಆಹ್ವಯಗೆ ನಮೋ ನಮೋ
ವಾಸುದೇವ ಭಕ್ತನಿಗೆ ನಮೋ ನಮೋ  ೨

ಮೂಡಿಲ್ಲಾಯ ಮೋಚಕಗೆ ನಮೋ ನಮೋ
ಬೇಡಿದ ವರವೀವ ನಮೋ ನಮೋ      ೩

ಬೀಜಪ್ರದಮುಕ್ತಿದಗೆ ನಮೋ ನಮೋ
ಕಂಜಜಾತಸಮನಿಗೆ ನಮೋ ನಮೋ   ೪

ಹುರುಳಿಯ ತಿಂದವಗೆ ನಮೋ ನಮೋ
ಪರಮಾತ್ಮ ಸಖನಿಗೆ ನಮೋ ನಮೋ  ೫

ಶಿವಭಟ್ಟಗೆಲಿದಗೆ ನಮೋ ನಮೋ
ಶಿವಶಕ್ರವಂದ್ಯನಿಗೆ ನಮೋ ನಮೋ     ೬

ಅಹಿಮಣಿಮಂತಕೃತ್ ನಮೋ ನಮೋ
ಬಹುಕ್ರೀಡೆಮಾಳ್ಪನಿಗೆ ನಮೋ ನಮೋ ೭

ತಲೆಶೂಲಕಳೆವಗೆ ನಮೋ ನಮೋ
ಕುಲಗುರುಜ್ಞಾನದಗೆ ನಮೋ ನಮೋ   ೮

ಪೂರ್ಣಪ್ರಜ್ಞ ಮುನಿವರ ನಮೋ ನಮೋ
ಪೂರ್ಣಜ್ಞಾನವಂತನಿಗೆ ನಮೋ ನಮೋ ೯

ಭಾಗವತಗದ್ಯವಕ್ತೃ ನಮೋ ನಮೋ
ಭಾಗೀರಥಿ ಮಿಂದವಗೆ ನಮೋ ನಮೋ ೧೦

ಆನಂದತೀರ್ಥರಿಗೆ ನಮೋ ನಮೋ
ಆನಂದಶಾಸ್ತ್ರಕೃತು ನಮೋ ನಮೋ     ೧೧

ದುಷ್ಟವಾದಿ ಜಯಿಪಗೆ ನಮೋ ನಮೋ
ದುಷ್ಟಭಾಷ್ಯ ಖಂಡಿಪಗೆ ನಮೋ ನಮೋ ೧೨

ವೇದವಿದ್ಯೆಪ್ರಚುರಗೆ ನಮೋ ನಮೋ
ವೇದವ್ಯಾಸ ಶಿಷ್ಯರಿಗೆ ನಮೋ ನಮೋ    ೧೩

ಸೂತ್ರ ಭಾಷ್ಯ ರಚಿಪಗೆ ನಮೋ ನಮೋ
ಸತ್ಯತೀರ್ಥವರದಗೆ ನಮೋ ನಮೋ     ೧೪ 

ಕೃಷ್ಣ ಪ್ರತಿಷ್ಠಾಪಕಗೆ ನಮೋ ನಮೋ
ಶಿಷ್ಟಜನರಕ್ಷಕಗೆ ನಮೋ ನಮೋ          ೧೫ 

ಶುದ್ಧಾಚಾರವಂತನಿಗೆ ನಮೋ ನಮೋ
ಶುದ್ಧಸತ್ವಮೂರುತಿಗೆ ನಮೋ ನಮೋ ೧೬

ಪರಮತಭಂಜಕಗೆ ನಮೋ ನಮೋ
ಪರಗ್ರಂಥರಚಿಪಗೆ ನಮೋ ನಮೋ     ೧೭

ಪರಿಪರಿಮಹಿಮಗೆ ನಮೋ ನಮೋ
ಹರಿಪ್ರತಿಬಿಂಬನಿಗೆ ನಮೋ ನಮೋ   ೧೮

ಭಕ್ತಜನಮುಕ್ತಿದಗೆ ನಮೋ ನಮೋ
ಯುಕ್ತಸೂಕ್ತಿವಂತನಿಗೆ ನಮೋ ನಮೋ ೧೯

ಹನುಮಗೆ ಭೀಮನಿಗೆ  ನಮೋ ನಮೋ
ಅನುಮಾನತೀರ್ಥರಿಗೆ ನಮೋ ನಮೋ ೨೦

ಬಾಗಿದ ಜನರನು ಬಿಡದೆ ಪೂರೆವಗೆ
ರಾಘವವಿಠಲೇಡ್ಯ ನಮೋ ನಮೋ      ೨೧

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT