MADIVANTARU UNABAHUDANNA
ಮಡಿವಂತರುಣಬಹುದಣ್ಣ .
ಕಡಿ ಕಡಿ ಕಲಿಕಾಲ ಮಡಿದು ಹೋಗಿದೆ ಧರ್ಮ.
ಉದಯ ಕಾಲಕೆ ಎದ್ದು ವಾಪಿಕೂಪದಿ ಮಿಂದು
ಮದದಿಂದ ಮಡಿಯುಟ್ಟು ಬಿಂಕದಿ ಪೂಜಿಸಿ
ಬುಧರ ದುರಿತವ ಜಪಿಸಿ ಕ್ರೋಧಾಹುತಿಗಳ ಹಾಕಿ
ಹೃದಯ ಕಲ್ಮಷದಿಂದ ಉಣುವುದು ಮಡಿಯೇ. ೧
ಮೌನದ ಸೋಗನು ಹಾಕಿ ಶಿಖೆಯನು ಕೆದರಿ
ನಾನೊಬ್ಬ ಶುಚಿಯೆಂದು ಅಶುಚಿ ವಿಷಯಗಳನಾಡಿ
ಮಾನವಿದೂರನ ಶೇಷವೆಂಬುದ ಮರೆತು
ಮಾನ ರುಚಿಯೊಳು ಇಡುತ ಉಣುವುದು ಮಡಿಯೇ. ೨
ಪಾಕಶೋಧಕ ಹಂಸ ಸ್ಮರಣೆಯು ಮಡಿಯು
ಪಾಕದೇವತೆ ವಾಯು ಸಿರಿಹರಿ ಸ್ಮೃತಿ ಮಡಿಯು
ನೋಕನೀಯನು ಉಂಡು ಬಿಟ್ಟಿದ್ದು ಮಡಿಯು
ಸೂಕರಾನ್ನವು ಡಂಭತನದೊಳು ಹಾಕಲು. ೩
ಪಂಕ್ತಿ ಪಾವನರೊಳು ಉಣುವುದೇ ಮಡಿಯು
ಸಕ್ತಿ ಶ್ರೀ ಹರಿಪಾದದೊಳಗಿರೆ ಮಡಿಯು ವಿ
ರಕ್ತಿ ಉಳ್ಳವರನ್ನ ಮೆಲುವುದೇ ಮಡಿಯು
ಸೂಕ್ತಿಯಿಂದಲಿ ಕರೆದು ಅನ್ನವಿಕ್ಕಲು ಮಡಿಯು. ೪
ಭೋಗಿಶಯನನ ಭಕುತರಿತ್ತ ಅನ್ನವು ಮಡಿಯು
ಬೇಗ ಅನ್ನದ ಅನ್ನ ಅನ್ನಾದ ಸ್ಮೃತಿ ಮಡಿಯು
ಗೂಗಿಯಂದದಿ ಹರಿಯ ಕಾಣದ ಮನುಜನ್ನ
ಕಡಿ ಕಡಿ ಕಲಿಕಾಲ ಮಡಿದು ಹೋಗಿದೆ ಧರ್ಮ.
ಉದಯ ಕಾಲಕೆ ಎದ್ದು ವಾಪಿಕೂಪದಿ ಮಿಂದು
ಮದದಿಂದ ಮಡಿಯುಟ್ಟು ಬಿಂಕದಿ ಪೂಜಿಸಿ
ಬುಧರ ದುರಿತವ ಜಪಿಸಿ ಕ್ರೋಧಾಹುತಿಗಳ ಹಾಕಿ
ಹೃದಯ ಕಲ್ಮಷದಿಂದ ಉಣುವುದು ಮಡಿಯೇ. ೧
ಮೌನದ ಸೋಗನು ಹಾಕಿ ಶಿಖೆಯನು ಕೆದರಿ
ನಾನೊಬ್ಬ ಶುಚಿಯೆಂದು ಅಶುಚಿ ವಿಷಯಗಳನಾಡಿ
ಮಾನವಿದೂರನ ಶೇಷವೆಂಬುದ ಮರೆತು
ಮಾನ ರುಚಿಯೊಳು ಇಡುತ ಉಣುವುದು ಮಡಿಯೇ. ೨
ಪಾಕಶೋಧಕ ಹಂಸ ಸ್ಮರಣೆಯು ಮಡಿಯು
ಪಾಕದೇವತೆ ವಾಯು ಸಿರಿಹರಿ ಸ್ಮೃತಿ ಮಡಿಯು
ನೋಕನೀಯನು ಉಂಡು ಬಿಟ್ಟಿದ್ದು ಮಡಿಯು
ಸೂಕರಾನ್ನವು ಡಂಭತನದೊಳು ಹಾಕಲು. ೩
ಪಂಕ್ತಿ ಪಾವನರೊಳು ಉಣುವುದೇ ಮಡಿಯು
ಸಕ್ತಿ ಶ್ರೀ ಹರಿಪಾದದೊಳಗಿರೆ ಮಡಿಯು ವಿ
ರಕ್ತಿ ಉಳ್ಳವರನ್ನ ಮೆಲುವುದೇ ಮಡಿಯು
ಸೂಕ್ತಿಯಿಂದಲಿ ಕರೆದು ಅನ್ನವಿಕ್ಕಲು ಮಡಿಯು. ೪
ಭೋಗಿಶಯನನ ಭಕುತರಿತ್ತ ಅನ್ನವು ಮಡಿಯು
ಬೇಗ ಅನ್ನದ ಅನ್ನ ಅನ್ನಾದ ಸ್ಮೃತಿ ಮಡಿಯು
ಗೂಗಿಯಂದದಿ ಹರಿಯ ಕಾಣದ ಮನುಜನ್ನ
ರಾಘವ ವಿಠಲ ತಾನು ಮೆಚ್ಚನು ಎಂದಿಗೂ. ೫
Comments
Post a Comment