SRI JAGANATHA DASARU

ಗುರು ಜಗನ್ನಾಥ ದಾಸರ ಪಾದವ
ಉರು ಭಕುತಿ ಇಂದಲಿ ಭಜಿಸೆಲೊ ಮನುಜ

ವಿಜಯ ರಾಯರ ಪೂರ್ಣ ಕರುಣಾ ಪಾತ್ರರು ಬುಧರು
ವಿಜಯ ವಿತ್ತು ಭವವ ದಾಟಿಸಿ ಪೊರೆವರು.  ೧

ಗೋಪಾಲದಾಸರ ಚರಣ ಪದುಮ ಭೃಂಗ
ಆಪತ್ತುಗಳ ಹರಿಸಿ ಇರಿಸು ಹರಿಪದ ಸಂಗ.    ೨

ರಂಗನ ಮಂಗಳ ಪದ ಕಂಡ ಸುಭಗನೇ
ಭಂಗಗೈದು ಕಾಯೋ ಬಂಧನವಾ.                ೩

ಹರಿಕಥೆ ಸುಧೆಯನು ವಸುಧೆಯೊಳ್ ಹರಡಿದೆ
ಹರಿತತ್ವಗಳು ಮನದಿ ಪೊಳೆವಂತೆ ಮಾಡೋ. ೪

ಇವರ ಭಾಗ್ಯವನೆಂತೋ ವರ್ಣಿಸಲಿ ಅಲ್ಪನು
ಇವರ ಭಜಿಸಲು ಪೊರೆವ ರಾಘವ ವಿಠಲನು. ೫

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha