Vijayaraya Vijayaraya

ವಿಜಯರಾಯ ವಿಜಯರಾಯ ! ವಿಜಯರಾಯ ಎನ್ನಿರೋ! 

ವಿಜಯಸಾರಥಿ ಒಲಿದು ವೇಗದಿ ! ಭವದ ವಿಜಯ ಕೊಡುವನೋ ! 


ವಿ ಎನ್ನೆ ವಿವೇಕದಿಂದಲಿ ! ವೀಂದ್ರರೊಢನ ತೋರ್ವನೊ  

ಜ ಎಂದು ಜಪಿಸೆ ನಿತ್ಯದಿ ! ಕರಣ ಜಯವ ಕೊಡುವನೋ 

ಯ ಎನ್ನೆ ಯತುನದಿಂದ ! ಯಮನು ಅಂಜಿ ನೋಡನೋ 

ರಾ ಎನಲು ರಾಗದಿಂದಲಿ ! ರಮೆಯ ಅರಸ ರಕ್ಷಿಪನೋ !!೧!! 


ಯ ವೆನಲು ಸಂಯಮದಿ ! ಯಜ್ಞ ಸುತನು ಒಲಿವನು ! 

ಆವನು ಸಾರಿದ ತತ್ವಗಳನು ! ಒಲಿದು ಮತಿಗೆ ತರುವನು 

ಇವರ ನಾಮವ ಪೇಳ್ವ ಜನಗಳ ! ಜನುಮ ಭುವಿಲಿ ಸಾರ್ಥವು ! 

ಅವನಿಯೊಳಗೆ ಇವರ ತೊರೆದರೆ ! ಗತಿಯು ಅವಗೆ ನರಕವು !!೨!! 


ಇವರನಂಬಿದ ಜನಕೆ ಹರಿಯು ! ಗತಿಯನಿಪ್ಪನು ನಿಶ್ಚಯ 

ಇವರ ಪಾಡಲು ಜನರು ತೊಳೆವರು ! ತಮ್ಮ ಪಾಪದ ಸಂಚಯ ! 

ಇವರ ಬೇಡಲು ಹರಿಯ ಜ್ಞಾನವು ! ಒದಗಿ ಬಪ್ಪುದಸಂಶಯ ! 

ಇವರ ಧ್ಯಾನವ ಮಾಡುತಿರಲು ! ಕಾಯ್ವ ರಾಘವವಿಠ್ಠಲ !!೩!!

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha