Yadava krishnanu

ಯಾದವ ಕೃಷ್ಣನು ಯುದ್ಧದಿ ಮೋಹಿತ
ನಾದ ಪಾರ್ಥಗೆ ಗೀತೆಯ ಪೇಳ್ದನು.

ಬಂಧುವ್ಯಾಮೋಹದಿ ಶಸ್ತ್ರವ ಬಿಸುಟಿರೆ
ಅಂದದ ವಚನವ ನಂದನು ಪೇಳ್ದನು
ನೊಂದದಿರೋ ಪಾರ್ಥ ಜೀವನು ನಿತ್ಯನು
ಬಂದು ಪೋಗ್ವುದು ಈ ಶರೀರವು.  ೧

ಕರ್ಮದ ಮರ್ಮವ ಅರಿಯೊ ಪಾರ್ಥನೆ
ಕರ್ಮದ ತ್ಯಾಗವು ಪುರುಷಾರ್ಥವಲ್ಲವು
ಪರಮಪುರುಷ ಹರಿಯಜ್ಞವು ಕರ್ಮವು
ಅರ್ಪಿಸೆ ಭಕುತಿಲಿ ಮುಕುತಿಯೀವುದು. ೨

ಜ್ಞಾನಿಯ ಕರ್ಮವು ಫಲವ ಕೊಡುವುದು
ಹೀನ ಕರ್ಮವು ಬಂಧಕವಾಗ್ವುದು
ಮನವ ಎನ್ನಲಿ ಇಡುತ ಸಕಲವು
ಎನ್ನಾಧೀನವು ಎನುತಲರ್ಚಿಸು .   ೩

ಧ್ಯಾನಕೆ ಜ್ಞಾನವು ಜ್ಞಾನಕೆ ಕರ್ಮವು
ಮನದ ಶಾಂತಿಗೆ ಶುದ್ಧ ಕರ್ಮವು
ಇನಿತು ಮೋಕ್ಷಕೆ ಸಾಧನ ಕರ್ಮವು
ಅನಿಲಮತವಿದು ಏಳೆಲೊ ಪಾರ್ಥನೇ. ೪

ಜಗದ ಚಕ್ರವ ನಿರುತ ತಿರುಗಿಸು
ರಾಗವ ವಿಷಯದಿ ಧೈರ್ಯದಿ ಭೇದಿಸು
ಸಾಗರಶಯನನು ಸಕಲ ನಿಯಂತೃವು
ಬಗೆದು ದೇಹವ ಬಿಡೆ ನಿರ್ವಾಣವು. ೫

ಎನ್ನ ಭಕುತರು ನಾಶ ಹೊಂದರು
ಎನ್ನ ದ್ವೇಷಿಸೆ ತಮವು ನಿಯತವು
ಮನವ ಸಾತ್ವಿಕ ಪಥದಿ ಕೂಡಿಸೊ
ಎನ್ನ ಪೂಜೆಯು ವಿವಿಧ ಧರ್ಮವು. ೬

ರಮೆಗೆ ಅರಸನು ಭಕ್ತಿಗೆ ಒಲಿವೆನು
ಸಮನು ಉತ್ತಮ ಪುರುಷ ಕ್ಷೇತ್ರಜ್ಞನು
ತಮವು ನೀಗಿತೆ ಶಸ್ತ್ರವ ಹಿಡಿಯೆಲೊ
ನಿಮ್ಮದೆ ಜಯವೆಂದ ರಾಘವವಿಠಲನು. ೭

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha