SHOBANA SAMVATSARA

 ಶೋಭನ ಸಂವತ್ಸರ 


ಯುಗದ ಪ್ರೇರಕ ಆದಿ ಪುರುಷನು
ಯುಗಾದಿಕೃತನು ರಮೆಯ ಅರಸನು
ಯುಗದವರ್ತಕನೆಂದು ಕರೆಸುವ ವಿಶ್ವ ನಾಮಕನು.
ಯುಗಳದೂರನೆ ದೈತ್ಯರನು ಸಂ
ಯುಗದಿ ಓಡಿಸಿ ನಿಜರ ಪಿಡಿ ಮೂರ್
ಯುಗನೆ ನಿನ್ನಯ ಸ್ಮರಣೆ ನೀಡುತ ಎಮ್ಮ ರಕ್ಷಿಪುದು.

ನಿಗಮ ಗೋಚರ ಅಚರ ಮಹಿಮನೆ
ಜಗಕೆ ನಾಥನೆ ಸಿಂಧು ಶಯನನೆ
ಅಗವ ಧರಿಸಿದ ಬಾಲ ಕೃಷ್ಣನೆ ನಮಿಪೆ ಅನುದಿನವೂ.
ಖಗಸುವಾಹನ ಮನವ ಶೋಧಿಸಿ
ಬಗೆಬಗೆಮಹಿಮೆ ಚಿತ್ತದಿರುಸುತ
ಉಗಮ ರಹಿತನೆ ಸಲಹು ದೇವನೆ ಭಕ್ತವತ್ಸಲನೆ.

ಶೋಭಿಸಿಪ್ಪನು ತ್ರಿದಶ ಗಣದಲಿ
ಶೋಭೆ ನೀಡಲಿ ಸ್ವಜನ ಮಧ್ಯದಿ
ಶೋಭೆಯೀವನು ತರಣಿ  ಚಂದ್ರಗೆ ಪೊಳೆವ ಉಡುಗಣಕೆ
ಶೋಭನಾಭವು ಪಾದಯುಗಳವು
ಶೋಭನಾಂಗನು ದುರಿತ ಕಳೆಯುತ
ಶೋಭನಾಹ್ವಯ ಜನಕೆ ಶುಭದನು ರಾಘವವಿಠಲನು.

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT