JOKE GOPIYARELLA

 ಜೋಕೆ ಗೋಪಿಯರೆಲ್ಲ ಜೋಕೆ ಗೋಪಿಯರೆ
ತೋಕತನದಲಿ ತಾನು ನೋಕನೀಯನು ಇಪ್ಪ

ಏನು ಬಣ್ಣಿಸಲವನ ನಿತ್ಯ ಚೆಲುವಿಕೆಯನು
ಭಾನುಸಾಸಿರ ಕೋಟಿ ಪ್ರಕಾಶ ಸುಹಾಸ
ತಾನೆಂಥ ಚೆಲ್ವ ಎಂದು ಮೈಮರೆಯದಿರಿ
ಜಾಣ ನುಸುಳಿ ಬೆಣ್ಣೆ ಕದಿಯುವ ನೋಡೆ.        ೧

ಪುಟ್ಟ ಬಾಲಕನೆಂದು ಮೋಸ ಹೋಗದಿರೆ
ಇಟ್ಟ ಉದರದಲ್ಲಿ ಸಕಲ ಜಗವ ಕಣೆ
ಇಟ್ಟ ಪಾಲ್ ಮೊಸರ ಒಬ್ಬನುಣ್ಣವ ನೋಡೆ
ಬಿಟ್ಟದ್ದನ್ನು ಮರ್ಕಟಕಿಡುವ ಕಾಯೆ.               ೨

ಕೆಟ್ಟತನವು ಇಲ್ಲ ಸುಗುಣ ಪೂರ್ಣನಿಗೆ
ಬೆಟ್ಟ ಹೊತ್ತುವ ಮುಂದೆ ಎಮ್ಮ ಹಿತಕ್ಕೆಂದೆ
ಕಟ್ಟಿದ ತುರುಕರು ಬಿಡಿಸಿ ಓಡುವನಲ್ಲೆ
ಪಟ್ಟ ಕಷ್ಟವನೊಂದಿಷ್ಟು ಎಣಿಸನಲ್ಲೆ.              ೩

ವಿಷವುಣುವನಲ್ಲೆ ವಿಷಶಯನನು ಕಣೆ
ಉಷರ್ಬುದನ ಮೆಲ್ವ ಅಗ್ನಿಮುಖನು ತಾನೆ
ವಿಷದನ ಮೇಲ್ ಕುಣಿವ ವಿಷದಮಂಚವು ಕಣೆ
ದ್ವಿಷರ ಬಡಿವನಲ್ಲೆ ಅಸುನಾಥಗೆಣೆಗಾಣೆ.      ೪

ಸರದಿ ಜಾರಿದನಲ್ಲೆ ಮತ್ಸ್ಯರೂಪನು ತಾನೆ
ಗಿರಿ ಹೊತ್ತಿದ ಹ್ಯಾಂಗೆ ಕೂರ್ಮರೂಪನು ತಾನೆ
ಧರೆಯ ಮೆಲುವನಲ್ಲೆ ಧರೆಯಧರನು ತಾನೆ
ಅರಿಗಳ ಭಯವಹುದೆ ನರಹರಿಯು ತಾನೆ.   ೫

ಹಿರಿದು ರೂಪವು ಹ್ಯಾಂಗೆ ವಾಮನ ತಾನಲ್ಲೆ
ಕುರುಪ ಕುಲ ಅಂತಕ ಭಾರ್ಗವ ತಾನಲ್ಲೆ
ಅರದೂರ ಕುಬ್ಜೆಯು ಶ್ರೀ ರಾಮ ತಾನಲ್ಲೆ
ಪರಸತಿ ಪ್ರಿಯನಲ್ಲೆ ಸಿರಿ ಕೃಷ್ಣ ತಾನಲ್ಲೆ.        ೬

ಕುಂತಿಸುತಬೋಧಕ ಬುದ್ಧ ರೂಪನು ತಾನೆ
ಅಂತ ಕಂಸಗಿವನು ಕಲ್ಕಿ ರೂಪನು ತಾನೆ
ಚಿಂತಿಸಲನುದಿನ ಪರಚಿಂತೆ ಬಿಡುತಲಿ
ಕಂತುಪಿತ ರಾಘವ ವಿಠಲ ಪೊರೆಯುವ ತಾನೆ. ೭

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha