Posts

Showing posts from May, 2023

Yadava krishnanu

ಯಾದವ ಕೃಷ್ಣನು ಯುದ್ಧದಿ ಮೋಹಿತ ನಾದ ಪಾರ್ಥಗೆ ಗೀತೆಯ ಪೇಳ್ದನು. ಬಂಧುವ್ಯಾಮೋಹದಿ ಶಸ್ತ್ರವ ಬಿಸುಟಿರೆ ಅಂದದ ವಚನವ ನಂದನು ಪೇಳ್ದನು ನೊಂದದಿರೋ ಪಾರ್ಥ ಜೀವನು ನಿತ್ಯನು ಬಂದು ಪೋಗ್ವುದು ಈ ಶರೀರವು.  ೧ ಕರ್ಮದ ಮರ್ಮವ ಅರಿಯೊ ಪಾರ್ಥನೆ ಕರ್ಮದ ತ್ಯಾಗವು ಪುರುಷಾರ್ಥವಲ್ಲವು ಪರಮಪುರುಷ ಹರಿಯಜ್ಞವು ಕರ್ಮವು ಅರ್ಪಿಸೆ ಭಕುತಿಲಿ ಮುಕುತಿಯೀವುದು. ೨ ಜ್ಞಾನಿಯ ಕರ್ಮವು ಫಲವ ಕೊಡುವುದು ಹೀನ ಕರ್ಮವು ಬಂಧಕವಾಗ್ವುದು ಮನವ ಎನ್ನಲಿ ಇಡುತ ಸಕಲವು ಎನ್ನಾಧೀನವು ಎನುತಲರ್ಚಿಸು .   ೩ ಧ್ಯಾನಕೆ ಜ್ಞಾನವು ಜ್ಞಾನಕೆ ಕರ್ಮವು ಮನದ ಶಾಂತಿಗೆ ಶುದ್ಧ ಕರ್ಮವು ಇನಿತು ಮೋಕ್ಷಕೆ ಸಾಧನ ಕರ್ಮವು ಅನಿಲಮತವಿದು ಏಳೆಲೊ ಪಾರ್ಥನೇ. ೪ ಜಗದ ಚಕ್ರವ ನಿರುತ ತಿರುಗಿಸು ರಾಗವ ವಿಷಯದಿ ಧೈರ್ಯದಿ ಭೇದಿಸು ಸಾಗರಶಯನನು ಸಕಲ ನಿಯಂತೃವು ಬಗೆದು ದೇಹವ ಬಿಡೆ ನಿರ್ವಾಣವು. ೫ ಎನ್ನ ಭಕುತರು ನಾಶ ಹೊಂದರು ಎನ್ನ ದ್ವೇಷಿಸೆ ತಮವು ನಿಯತವು ಮನವ ಸಾತ್ವಿಕ ಪಥದಿ ಕೂಡಿಸೊ ಎನ್ನ ಪೂಜೆಯು ವಿವಿಧ ಧರ್ಮವು. ೬ ರಮೆಗೆ ಅರಸನು ಭಕ್ತಿಗೆ ಒಲಿವೆನು ಸಮನು ಉತ್ತಮ ಪುರುಷ ಕ್ಷೇತ್ರಜ್ಞನು ತಮವು ನೀಗಿತೆ ಶಸ್ತ್ರವ ಹಿಡಿಯೆಲೊ ನಿಮ್ಮದೆ ಜಯವೆಂದ ರಾಘವವಿಠಲನು. ೭

Vijayaraya Vijayaraya

ವಿಜಯರಾಯ ವಿಜಯರಾಯ ! ವಿಜಯರಾಯ ಎನ್ನಿರೋ!  ವಿಜಯಸಾರಥಿ ಒಲಿದು ವೇಗದಿ ! ಭವದ ವಿಜಯ ಕೊಡುವನೋ !  ವಿ ಎನ್ನೆ ವಿವೇಕದಿಂದಲಿ ! ವೀಂದ್ರರೊಢನ ತೋರ್ವನೊ   ಜ ಎಂದು ಜಪಿಸೆ ನಿತ್ಯದಿ ! ಕರಣ ಜಯವ ಕೊಡುವನೋ  ಯ ಎನ್ನೆ ಯತುನದಿಂದ ! ಯಮನು ಅಂಜಿ ನೋಡನೋ  ರಾ ಎನಲು ರಾಗದಿಂದಲಿ ! ರಮೆಯ ಅರಸ ರಕ್ಷಿಪನೋ !!೧!!  ಯ ವೆನಲು ಸಂಯಮದಿ ! ಯಜ್ಞ ಸುತನು ಒಲಿವನು !  ಆವನು ಸಾರಿದ ತತ್ವಗಳನು ! ಒಲಿದು ಮತಿಗೆ ತರುವನು  ಇವರ ನಾಮವ ಪೇಳ್ವ ಜನಗಳ ! ಜನುಮ ಭುವಿಲಿ ಸಾರ್ಥವು !  ಅವನಿಯೊಳಗೆ ಇವರ ತೊರೆದರೆ ! ಗತಿಯು ಅವಗೆ ನರಕವು !!೨!!  ಇವರನಂಬಿದ ಜನಕೆ ಹರಿಯು ! ಗತಿಯನಿಪ್ಪನು ನಿಶ್ಚಯ  ಇವರ ಪಾಡಲು ಜನರು ತೊಳೆವರು ! ತಮ್ಮ ಪಾಪದ ಸಂಚಯ !  ಇವರ ಬೇಡಲು ಹರಿಯ ಜ್ಞಾನವು ! ಒದಗಿ ಬಪ್ಪುದಸಂಶಯ !  ಇವರ ಧ್ಯಾನವ ಮಾಡುತಿರಲು ! ಕಾಯ್ವ ರಾಘವವಿಠ್ಠಲ !!೩!!

JOKE GOPIYARELLA

 ಜೋಕೆ ಗೋಪಿಯರೆಲ್ಲ ಜೋಕೆ ಗೋಪಿಯರೆ ತೋಕತನದಲಿ ತಾನು ನೋಕನೀಯನು ಇಪ್ಪ ಏನು ಬಣ್ಣಿಸಲವನ ನಿತ್ಯ ಚೆಲುವಿಕೆಯನು ಭಾನುಸಾಸಿರ ಕೋಟಿ ಪ್ರಕಾಶ ಸುಹಾಸ ತಾನೆಂಥ ಚೆಲ್ವ ಎಂದು ಮೈಮರೆಯದಿರಿ ಜಾಣ ನುಸುಳಿ ಬೆಣ್ಣೆ ಕದಿಯುವ ನೋಡೆ.        ೧ ಪುಟ್ಟ ಬಾಲಕನೆಂದು ಮೋಸ ಹೋಗದಿರೆ ಇಟ್ಟ ಉದರದಲ್ಲಿ ಸಕಲ ಜಗವ ಕಣೆ ಇಟ್ಟ ಪಾಲ್ ಮೊಸರ ಒಬ್ಬನುಣ್ಣವ ನೋಡೆ ಬಿಟ್ಟದ್ದನ್ನು ಮರ್ಕಟಕಿಡುವ ಕಾಯೆ.               ೨ ಕೆಟ್ಟತನವು ಇಲ್ಲ ಸುಗುಣ ಪೂರ್ಣನಿಗೆ ಬೆಟ್ಟ ಹೊತ್ತುವ ಮುಂದೆ ಎಮ್ಮ ಹಿತಕ್ಕೆಂದೆ ಕಟ್ಟಿದ ತುರುಕರು ಬಿಡಿಸಿ ಓಡುವನಲ್ಲೆ ಪಟ್ಟ ಕಷ್ಟವನೊಂದಿಷ್ಟು ಎಣಿಸನಲ್ಲೆ.              ೩ ವಿಷವುಣುವನಲ್ಲೆ ವಿಷಶಯನನು ಕಣೆ ಉಷರ್ಬುದನ ಮೆಲ್ವ ಅಗ್ನಿಮುಖನು ತಾನೆ ವಿಷದನ ಮೇಲ್ ಕುಣಿವ ವಿಷದಮಂಚವು ಕಣೆ ದ್ವಿಷರ ಬಡಿವನಲ್ಲೆ ಅಸುನಾಥಗೆಣೆಗಾಣೆ.      ೪ ಸರದಿ ಜಾರಿದನಲ್ಲೆ ಮತ್ಸ್ಯರೂಪನು ತಾನೆ ಗಿರಿ ಹೊತ್ತಿದ ಹ್ಯಾಂಗೆ ಕೂರ್ಮರೂಪನು ತಾನೆ ಧರೆಯ ಮೆಲುವನಲ್ಲೆ ಧರೆಯಧರನು ತಾನೆ ಅರಿಗಳ ಭಯವಹುದೆ ನರಹರಿಯು ತಾನೆ.   ೫ ಹಿರಿದು ರೂಪವು ಹ್ಯಾಂಗೆ ವಾಮನ ತಾನಲ್ಲೆ ಕುರುಪ ಕುಲ ಅಂತಕ ಭಾರ್ಗವ ತಾನಲ್ಲೆ ಅರದೂರ ಕುಬ್ಜೆಯು ಶ್ರೀ ರಾಮ ತಾನಲ್ಲೆ ಪರಸತಿ ಪ್ರಿಯನಲ್ಲೆ ಸಿರಿ ಕೃಷ್ಣ ತಾನಲ್ಲೆ.     ...

SHOBANA SAMVATSARA

  ಶೋಭನ ಸಂವತ್ಸರ  ಯುಗದ ಪ್ರೇರಕ ಆದಿ ಪುರುಷನು ಯುಗಾದಿಕೃತನು ರಮೆಯ ಅರಸನು ಯುಗದವರ್ತಕನೆಂದು ಕರೆಸುವ ವಿಶ್ವ ನಾಮಕನು. ಯುಗಳದೂರನೆ ದೈತ್ಯರನು ಸಂ ಯುಗದಿ ಓಡಿಸಿ ನಿಜರ ಪಿಡಿ ಮೂರ್ ಯುಗನೆ ನಿನ್ನಯ ಸ್ಮರಣೆ ನೀಡುತ ಎಮ್ಮ ರಕ್ಷಿಪುದು. ನಿಗಮ ಗೋಚರ ಅಚರ ಮಹಿಮನೆ ಜಗಕೆ ನಾಥನೆ ಸಿಂಧು ಶಯನನೆ ಅಗವ ಧರಿಸಿದ ಬಾಲ ಕೃಷ್ಣನೆ ನಮಿಪೆ ಅನುದಿನವೂ. ಖಗಸುವಾಹನ ಮನವ ಶೋಧಿಸಿ ಬಗೆಬಗೆಮಹಿಮೆ ಚಿತ್ತದಿರುಸುತ ಉಗಮ ರಹಿತನೆ ಸಲಹು ದೇವನೆ ಭಕ್ತವತ್ಸಲನೆ. ಶೋಭಿಸಿಪ್ಪನು ತ್ರಿದಶ ಗಣದಲಿ ಶೋಭೆ ನೀಡಲಿ ಸ್ವಜನ ಮಧ್ಯದಿ ಶೋಭೆಯೀವನು ತರಣಿ  ಚಂದ್ರಗೆ ಪೊಳೆವ ಉಡುಗಣಕೆ ಶೋಭನಾಭವು ಪಾದಯುಗಳವು ಶೋಭನಾಂಗನು ದುರಿತ ಕಳೆಯುತ ಶೋಭನಾಹ್ವಯ ಜನಕೆ ಶುಭದನು ರಾಘವವಿಠಲನು.